Home ಟಾಪ್ ಸುದ್ದಿಗಳು ಗಾಝಾ ಮೇಲಿನ ಇಸ್ರೇಲ್ ದಾಳಿಗೆ ನಿತ್ಯ ನಾಲ್ಕು ಗಂಟೆ ‘ಕದನ ವಿರಾಮ!

ಗಾಝಾ ಮೇಲಿನ ಇಸ್ರೇಲ್ ದಾಳಿಗೆ ನಿತ್ಯ ನಾಲ್ಕು ಗಂಟೆ ‘ಕದನ ವಿರಾಮ!

1 ತಿಂಗಳಿಂದ ಹಮಾಸ್ VS ಇಸ್ರೇಲ್ ಸೇನೆಯ ನಡುವೆ ಭೀಕರ ರಕ್ತಪಾತ ನಡೆದಿದ್ದು, ಗಾಝಾ ಜನತೆ ನಿತ್ಯ ಸಾವೀಗೀಡಾಗುತ್ತಿದ್ದಾರೆ. ಇಡೀ ಜಗತ್ತೇ “ಸಾಕು ನಿಲ್ಲಿಸಿ ಅಮಾಯಕರ ಹತ್ಯಾಕಾಂಡ” ಎಂದು ಇಸ್ರೇಲ್‌ಗೆ ಹೇಳುತ್ತಿದೆ. ವಿಶ್ವ ಸಂಸ್ಥೆ ಆಕ್ರೋಶ ಹೊರಹಾಕುತ್ತಾ ಇದೆ. ಆದರೆ ಕದನವಿರಾಮವನ್ನು ಇಸ್ರೇಲ್ ಒಪ್ಪಿರಲಿಲ್ಲ. ಇದೀಗ ಇಸ್ರೇಲ್ ‘ಕದನ ವಿರಾಮ’ ಕ್ಕೆ ಒಪ್ಪಿದೆ ಎಂಬ ಮಾಹಿತಿ ಹೊರಬಂದಿದೆ.

ಗಾಝಾ ಮೇಲೆ ನಡೆಸುತ್ತಿರುವ ದಾಳಿಗೆ ಬ್ರೇಕ್ ಹಾಕಲು ಇಸ್ರೇಲ್ ಸೇನೆ ಮುಂದಾಗಿದ್ದು, ನರಳುತ್ತಿರುವ ಜನರನ್ನು ರಕ್ಷಣೆ ಮಾಡಲು, ವಿಶ್ವಸಂಸ್ಥೆ & ಇತರ ಜಾಗತಿಕ ಸಂಸ್ಥೆಗಳಿಗೆ ನೆರವಾಗೋಕೆ ಇಸ್ರೇಲ್ ಇಂಥ ಕ್ರಮಕ್ಕೆ ಮುಂದಾಗಿದೆ ಎನ್ನುವ ಮಾತು ಕೇಳಿಬಂದಿದೆ.

ಆದರೆ ಯುದ್ಧ ಪೂರ್ತಿ ನಿಂತುಹೋಯಿತು ಎಂದು ಅರ್ಥವಲ್ಲವಂತೆ‌. ಅಮೆರಿಕ ನೀಡಿರುವ ಮಾಹಿತಿ ಪ್ರಕಾರ ಪ್ರತಿದಿನ 4 ಗಂಟೆ ಕಾಲ ಈ ರೀತಿ ಕದನ ವಿರಾಮ ಘೋಷಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಇಸ್ರೇಲ್ ಸೇನೆಯು ಯಾವುದೇ ರೀತಿ ಸೇನಾ ಕಾರ್ಯಾಚರಣೆ ನಡೆಸಲ್ಲ. ಅಂದ್ರೆ ಬಾಂಬ್ ಹಾಕುವುದು, ಗುಂಡಿನ ದಾಳಿ ಮಾಡುವುದು ಹೀಗೆ ಯಾವುದೇ ದಾಳಿಗಳು ಕದನ ವಿರಾಮ ಘೋಷಣೆ ಮಾಡಿದ ಸಮಯದಲ್ಲಿ ನಡೆಯಲ್ಲ. ಈ ಮೂಲಕವೇ ಉತ್ತರ ಗಾಝಾಪಟ್ಟಿ ಜನ, ಸಂಪೂರ್ಣವಾಗಿ ಉತ್ತರ ಗಾಜಾದಿಂದ ಸ್ಥಳಾಂತರ ಆಗಲು ನೆರವಾಗುವ ತಂತ್ರ ಇದರಲ್ಲಿದೆ ಎಂಬ ಮಾತು ಕೇಳಿಬಂದಿದೆ.

Join Whatsapp
Exit mobile version