ಕೃಷ್ಣಾಪುರ ಇಸ್ಲಾಮಿಕ್ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ (KISWA) ಅಧ್ಯಕ್ಷರಾಗಿ ಇಸ್ಮಾಯಿಲ್ NGC ಆಯ್ಕೆ

Prasthutha: December 23, 2021

ಜುಬೈಲ್: ಕೃಷ್ಣಾಪುರ ಇಸ್ಲಾಮಿಕ್ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ (KISWA) ಅಧ್ಯಕ್ಷರಾಗಿ ಇಸ್ಮಾಯಿಲ್ NGC ಆಯ್ಕೆಯಾಗಿದ್ದಾರೆ.

ಸೌದಿ ಅರೇಬಿಯಾದ ಅಲ್ ಜುಬೈಲ್ ನ ‘ ಇಷ್ಣಾಧ್ ‘ ರೆಸಾರ್ಟ್ ನಲ್ಲಿ ನಡೆದ ಕೃಷ್ಣಾಪುರ ಇಸ್ಲಾಮಿಕ್ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಇದರ ವಾರ್ಷಿಕ ಕಿಶ್ವ ಮೀಟ್ ಮತ್ತು ಮಹಾಸಭೆಯಲ್ಲಿ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.

ಮಾಸ್ಟರ್ ಮೊಹಮ್ಮದ್ ಮುಹೀಝ್ ರವರ ಕಿರಾಹತ್ ನೊಂದಿಗೆ ಸಭೆಯನ್ನು ಪ್ರಾರಂಭಿಸಲಾಯ್ತು. ಸಭೆಯ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಇಸ್ಮಾಯಿಲ್ NGC , ಕೃಷ್ಣಾಪುರ ಪರಿಸರದ ಸಮುದಾಯದ ಬಡವರ ಕಷ್ಟಗಳಿಗೆ ಸ್ಪಂದಿಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು 2020 ರಲ್ಲಿ ಸೌದಿ ಅರೇಬಿಯಾದಲ್ಲಿ ಹುಟ್ಟಿಕೊಂಡ ಕಿಶ್ವ ಸಂಘಟನೆಯು ಎಲ್ಲ ಸದಸ್ಯರ ನೆರವಿನೊಂದಿಗೆ ಅತ್ಯುತ್ತಮವಾದ ಸೇವೆಯನ್ನು ಮಾಡುತ್ತಿದ್ದು , ಇನ್ನು ಮುಂದಕ್ಕೂ ಬಡವರ ನೆರವಿಗಾಗಿ ಅತ್ಯತ್ತಮವಾದ ಯೋಜನೆಗಳನ್ನು ಹಾಕಿಕೊಂಡಿದೆ. ಎಲ್ಲಾ ಸದಸ್ಯರು ಸಹಕರಿಸಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದರು.

ಸಂಸ್ಥೆಯ ಉಪಾಧ್ಯಕ್ಷರಾದ ಜನಾಬ್ ಮುಬೀನ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥೆಯ ಸದಸ್ಯರಾದ ಜನಾಬ್ BA ಅಬೂಸಾಲಿ ಅವರು ಸ್ವಾಗತಿಸಿದರು . ಜನಾಬ್ BK ಹೈದರ್ ರವರು ಕಿಶ್ವ ಇದರ 2020-2021 ವಾರ್ಷಿಕ ವರದಿಯನ್ನು ಸಭೆಯಲ್ಲಿ ಓದಿ ಹೇಳಿದರು. ಪ್ರಧಾನ ಕಾರ್ಯದರ್ಶಿ KC ಮೊಹಮ್ಮದ್ ಆಲಿ ಯವರು 2020-2021 ಸಾಲಿನ ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಿದರು.

45 ಸದಸ್ಯರಿರುವ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಿ ಈ ಕೆಳಗಿನವರನ್ನು ಪಧಾದಿಕಾರಿಗಳನ್ನಾಗಿ ಆಯ್ಕೆ ಮಾಡಲಾಯ್ತು.
ಅಧ್ಯಕ್ಷ : ಜನಾಬ್ ಇಸ್ಮಾಯಿಲ್ NGC
ಉಪಾಧ್ಯಕ್ಷರು : ಜನಾಬ್ ಮುಬೀನ್ ಮತ್ತು ಜನಾಬ್ ಕೆ.ಎಂ. ಕಬೀರ್
ಪ್ರಧಾನ ಕಾರ್ಯದರ್ಶಿ : ಜನಾಬ್ KC ಮೊಹಮ್ಮದ್ ಅಲಿ

ಕಾರ್ಯದರ್ಶಿಗಳು :ಜನಾಬ್ ಶಕೀಲ್ ವೆಲ್ಕಮ್ , ಜನಾಬ್ ಶಬೀರ್ ಕೃಷ್ಣಾಪುರ, ಜನಾಬ್ NAINAR ಆಸಿಫ್, ಜನಾಬ್ ಫೈಝಲ್FN


ಕೋಶಾಧಿಕಾರಿಗಳು : ಜನಾಬ್ ಬಶೀರ್ ವೆಲ್ಕಮ್ ಹಾಗೂ ಇಂತಿಯಾಝ್ NGC

ಸಲಹೆಗಾರರು: ಜನಾಬ್ ಹೈದರ್ BK, ಜನಾಬ್ BA ಅಬುಸಾಲಿ, ಜನಾಬ್ ಇಮ್ರಾನ್ ಜಮಾತ್, ಜನಾಬ್ KM ಹುಸೈನ್, ಸಂಘಟನಾ ಕಾರ್ಯದರ್ಶಿಗಳು: ಜನಾಬ್ ನವಾಝ್, ಜನಾಬ್ ಕಬೀರ್ Lucky star

ಕಿಶ್ವ ಘಟಕದ ಸಂಯೋಜಕರಾಗಿ ಈ ಕೆಳಗಿನವರನ್ನು ಆರಿಸಲಾಯಿತು.
ರಿಯಾದ್ ಘಟಕ : ಜನಾಬ್ ಉಮರ್ , ಜನಾಬ್ ಮುಹಮ್ಮದ್ ಅಲಿ WELCOME
ಯಾಂಬು ಘಟಕ : ಜನಾಬ್ ಸರ್ಫರಾಝ್, ಜನಾಬ್ ಇಕ್ಬಾಲ್,
ಜಿಜ್ಯಾನ್ ಘಟಕ : ಜನಾಬ್ ಔಫಾಝ್
ಕಾರ್ಯಕ್ರಮದ ಕೊನೆಯಲ್ಲಿ ಮುಬೀನ್ ಧನ್ಯವಾದ ಸಮರ್ಪಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!