ಹಮಾಸ್ ನ ಮುಖಂಡರಾಗಿ ಇಸ್ಮಾಯಿಲ್ ಹಾನಿಯಾ ಅವಿರೋಧ ಆಯ್ಕೆ

Prasthutha|

ರಮಲ್ಲಾ : ಪೆಲೆಸ್ತೀನ್ ನ ಬಲಿಷ್ಠ ಸಂಘಟನೆ ಹಮಾಸ್ ನ ಮುಖಂಡರಾಗಿ ಇಸ್ಮಾಯಿಲ್ ಹನಿಯಾ ಅವಿರೋಧವಾಗಿ ಮರು ಆಯ್ಕೆಯಾಗಿರುವುದಾಗಿ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.

- Advertisement -

ಹಮಾಸ್ ನ ರಾಜಕೀಯ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆಯಲ್ಲಿ ಸಾವಿರಾರು ಸದಸ್ಯರು ಪಾಲ್ಗೊಂಡಿದ್ದು ಇಸ್ಮಾಯಿಲ್ರನ್ನು ಅವಿರೋಧವಾಗಿ ಮರು ಆಯ್ಕೆ ನಡೆಸಲಾಗಿದ್ದು ಇದರೊಂದಿಗೆ ಇಸ್ರೇಲ್ ನೊಂದಿಗಿನ ಇತ್ತೀಚಿನ ಸಂಘರ್ಷದ ಬಳಿಕ ಹಮಾಸ್ ಮೇಲಿನ ತನ್ನ ಹಿಡಿತವನ್ನು ಅವರು ಮತ್ತಷ್ಟು ಬಿಗಿಗೊಳಿಸಿದಂತಾಗಿದೆ. ಗಾಝಾಪಟ್ಟಿ ಹಮಾಸ್ ನಿಯಂತ್ರಣದಲ್ಲಿದ್ದು ಕಳೆದ ಮಾರ್ಚ್ ನಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಹಮಾಸ್ ನ ಗಾಝಾ ವಿಭಾಗದ ಮುಖ್ಯಸ್ಥರಾಗಿ ಯಹ್ಯಾ ಶಿನ್ವರ್ ಮರು ಆಯ್ಕೆಯಾಗಿದ್ದರು.

ಟರ್ಕಿ ಹಾಗೂ ಕತರ್ ನಲ್ಲಿ ದೇಶಭ್ರಷ್ಟ ಜೀವನ ನಡೆಸುತ್ತಿರುವ ಇಸ್ಮಾಯಿಲ್ 2017ರಿಂದ ಹಮಾಸ್ ರಾಜಕೀಯ ವಿಭಾಗದ ಮುಖ್ಯಸ್ಥರಾಗಿದ್ದು ಇತ್ತೀಚೆಗೆ ಕೈರೋ ನೇತೃತ್ವದಲ್ಲಿ ನಡೆದ ಶಾಂತಿ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು. 2006ರಲ್ಲಿ ಗಾಝಾದಲ್ಲಿ ನಡೆದ ಚುನಾವಣೆಯಲ್ಲಿ ಹಮಾಸ್ ಭರ್ಜರಿ ಗೆಲುವು ಸಾಧಿಸಿದ್ದು ಮತ್ತೊಂದು ಪಕ್ಷ ಫತಾಹ್ ಸೋಲುಂಡಿತ್ತು. ಆ ಬಳಿಕ ಅಲ್ಲಿ ಆಂತರಿಕ ಸಂಘರ್ಷ ಭುಗಿಲೆದ್ದಿದ್ದು ಪೆಲೆಸ್ತೀನ್ ಇಬ್ಬಾಗಗೊಂಡಿತ್ತು. ಫತಾಹ್ ಪಕ್ಷ ಪಶ್ಚಿಮ ದಂಡೆಯಲ್ಲಿನ ಪೆಲೆಸ್ತೀನಿಯನ್ ಅಥಾರಿಟಿಯ ಮೇಲೆ ನಿಯಂತ್ರಣ ಸಾಧಿಸಿದೆ.



Join Whatsapp