8ನೇ ತರಗತಿಯ ಪುಸ್ತಕದಲ್ಲಿ ಇಸ್ಲಾಮೋಫೋಬಿಕ್ ಚಿತ್ರ: ಕ್ರಮಕ್ಕೆ ಎಸ್ಐಒ ಒತ್ತಾಯ

Prasthutha|

ತೆಲಂಗಾಣ: 8ನೇ ತರಗತಿಯ ಶಾಲಾ ಪಠ್ಯಪುಸ್ತಕಗಳಲ್ಲಿನ ‘ಇಸ್ಲಾಮೋಫೋಬಿಕ್’ ವಿಷಯವನ್ನು ತಕ್ಷಣವೇ ತೆಗೆದು ಹಾಕಬೇಕೆಂದು ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ತೆಲಂಗಾಣ ಸರಕಾರವನ್ನು ಒತ್ತಾಯಿಸಿದೆ.

- Advertisement -


ಪಠ್ಯ ಪುಸ್ತಕದಲ್ಲಿ ಒಬ್ಬ ಭಯೋತ್ಪಾದಕನ ಚಿತ್ರವಿದ್ದು, ಅವನು ತನ್ನ ಬಲಗೈಯಲ್ಲಿ ರಾಕೆಟ್ ಲಾಂಚರ್ ಅನ್ನು ಹಿಡಿದಿರುವುದನ್ನು ಮತ್ತೊಂದು ಕೈಯಲ್ಲಿ ಪವಿತ್ರ ಕುರ್ ಆನ್ ಅನ್ನು ಹಿಡಿದಿರುವುದನ್ನು ತೋರಿಸುತ್ತದೆ. ಇದನ್ನು ‘ರಾಷ್ಟ್ರೀಯ ಚಳುವಳಿ – ಕೊನೆಯ ಹಂತ 1919-1947’ ಅಧ್ಯಾಯದಲ್ಲಿ ಪ್ರಕಟಿಸಲಾಗಿದೆ.


‘ಇಸ್ಲಾಮೋಫೋಬಿಕ್’ ವಿಷಯವನ್ನು ಪ್ರಕಟಿಸಿರುವುದು ಖಂಡನೀಯ ಹಾಗೂ ಪ್ರಕಾಶಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯದ ಶಿಕ್ಷಣ ಸಚಿವ ಪಿ. ಸಬಿತಾ ಇಂದ್ರ ರೆಡ್ಡಿಯನ್ನು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಇಂತಹ ವಿಷಯವು ವಿದ್ಯಾರ್ಥಿಗಳ ಮನಸ್ಸನ್ನು ಪೂರ್ವಗ್ರಹಗೊಳಿಸುತ್ತದೆ ಎಂದು ಎಸ್ ಐಒ ತೆಲಂಗಾಣದ ಅಧ್ಯಕ್ಷ ಡಾ. ತಲ್ಹಾ ಫೈಯಾಸುದ್ದೀನ್ ಹೇಳಿದ್ದಾರೆ.

- Advertisement -


ಇದು ಮುಸ್ಲಿಂ ಸಮುದಾಯದ ಬಗ್ಗೆ ದ್ವೇಷಪೂರಿತ ಮತ್ತು ಇಸ್ಲಾಮೋಫೋಬಿಕ್ ದೃಷ್ಟಿಕೋನವನ್ನು ಸೃಷ್ಟಿಸುತ್ತಿದೆ ಮತ್ತು ಪ್ರಚಾರ ಮಾಡುತ್ತಿದೆ, ಒಬ್ಬ ವ್ಯಕ್ತಿಯು ತನ್ನ ಬಲಗೈಯಲ್ಲಿ ಬಂದೂಕನ್ನು ಮತ್ತು ಎಡಗೈಯಲ್ಲಿ ಪವಿತ್ರ ಕುರಾನ್ ಹಿಡಿದಿರುವುದನ್ನು ತೋರಿಸುವ ಮೂಲಕ ಸಾಮರಸ್ಯ, ಏಕತೆಯನ್ನು ನಾಶಪಡಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Join Whatsapp