ಇಸ್ಲಾಂ ಮತ್ತು ಲಿಂಗಾಯತರಲ್ಲಿ ಸಾಮ್ಯತೆ ಇದೆ: ಪಂಡಿತಾರಾದ್ಯ ಸ್ವಾಮಿ

Prasthutha|

ಚಿತ್ರದುರ್ಗ: ಪ್ರವಾದಿ ಮುಹಮ್ಮದ್ ಅವರು ನಾವೆಲ್ಲರೂ ಒಂದಾಗಿ ಬಾಳುವುದನ್ನು ಹೇಳಿದ್ದಾರೆ. ದೇವರು ಒಬ್ಬ, ಮೂರ್ತಿ ಪೂಜೆ ಬೇಡ ಎಂಬ ಮಾತನ್ನು ಹೇಳಿದ್ದಾರೆ. ಲಿಂಗಾಯತ ಧರ್ಮ ಹಾಗೂ ಇಸ್ಲಾಂ ಬೇರೆ ಬೇರೆ ಆಗಿದ್ದರೂ, ಎರಡೂ ಧರ್ಮಗಳಲ್ಲಿ ಬಹುತೇಕ ಅಂಶಗಳಿವೆ ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾದ್ಯ ಸ್ವಾಮೀಜಿ ಹೇಳಿದ್ದಾರೆ.

- Advertisement -

ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಆಯೋಜನೆ ಮಾಡಲಾಗಿದ್ದ ಕುರ್ ಆನ್ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದ ಬಹುತೇಕ ಧರ್ಮಗಳಲ್ಲಿ ಅಹಿಂಸೆ ಮತ್ತು ಹೊಂದಾಣಿಕೆಯ ಜೀವನ ಮಾಡುವ ಅಂಶಗಳನ್ನು ಸಾರಿದ್ದಾರೆ. ಪ್ರವಾದಿ ಮುಹಮ್ಮದ್ ಅವರು ಕೂಡ ನಾವೆಲ್ಲರೂ ಒಂದಾಗಿ ಬಾಳುವ ಅಂಶಗಳನ್ನೇ ಹೇಳಿದ್ದಾರೆ. ಸ್ಥಾವರಗಳಿಗೆ ಪೂಜಿಸಬೇಡಿ, ಮೂರ್ತಿ ಪೂಜೆ ಬೇಡ ಎಂಬ ಮಾತನ್ನು ಹೇಳಿದ್ದಾರೆ. ಹೀಗಾಗಿ, ಲಿಂಗಾಯತ ಧರ್ಮ ಹಾಗೂ ಇಸ್ಲಾಂ ಧರ್ಮಗಳು ಬೇರೆ ಬೇರೆ ಆಗಿದ್ದರೂ, ಎರಡೂ ಧರ್ಮಗಳಲ್ಲಿ ಬಹುತೇಕ ಅಂಶಗಳಿವೆ ಎಂದು ತಿಳಿಸಿದರು.


ಜಗತ್ತಿನ ಎಲ್ಲ ಧರ್ಮಗಳಲ್ಲಿಯೂ ಹೇಳುವುದು ಒಂದೇ ಇದ್ದರೂ ಕೂಡ, ಯಾಕೆ ಮನುಷ್ಯ ಮನುಷ್ಯರ ನಡುವೆ ಗೋಡೆಗಳನ್ನು ಸೃಷ್ಟಿ ಮಾಡುತ್ತಾರೆ. ಬೇರುಗಳನ್ನು ನೆಡುತ್ತಿದ್ದಾರೆ. ವಿಚಾರವಂತರು, ವಿವೇಕವಂತರು ಜಾತಿ, ಧರ್ಮದ ಬೇರುಗಳನ್ನು ಕಿತ್ತುಹಾಕಿ, ಗೋಡೆಗಳನ್ನು ಕೆಡವಿ ಒಬ್ಬರು ಮತ್ತೊಬ್ಬರನ್ನು ಗೌರವಿಸುವಂತಹ ಪ್ರೀತಿಸುವಂತಹ ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.



Join Whatsapp
Exit mobile version