Home ಟಾಪ್ ಸುದ್ದಿಗಳು ಈಶ್ವರ ಖಂಡ್ರೆಯ ಟ್ವಿಟರ್ ಖಾತೆ ಹ್ಯಾಕ್: ಬಿಜೆಪಿ ಸಂಭ್ರಮಾಚರಣೆಯ ಚಿತ್ರ ಪೋಸ್ಟ್ ಮಾಡಿದ ಕಿಡಿಗೇಡಿಗಳು

ಈಶ್ವರ ಖಂಡ್ರೆಯ ಟ್ವಿಟರ್ ಖಾತೆ ಹ್ಯಾಕ್: ಬಿಜೆಪಿ ಸಂಭ್ರಮಾಚರಣೆಯ ಚಿತ್ರ ಪೋಸ್ಟ್ ಮಾಡಿದ ಕಿಡಿಗೇಡಿಗಳು

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಮತ್ತು ಶಾಸಕ ಈಶ್ವರ ಖಂಡ್ರೆಯವರ ಟ್ವಿಟರ್ ಖಾತೆ ಹ್ಯಾಕ್ ಮಾಡಿದ ಕಿಡಿಗೇಡಿಗಳು, ಗುಜರಾತ್ ಚುನಾವಣೆಯಲ್ಲಿ ಜಯಿಸಿದ ಬಿಜೆಪಿಯ ಸಂಭ್ರಮಾಚರಣೆಯ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಈಶ್ವರ ಖಂಡ್ರೆ ಈ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆದಿದೆ.

ʻʻಗುಜರಾತ್ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನ ಹಿನ್ನೆಲೆಯಲ್ಲಿ ಇಂದು ಚಿಂಚೋಳಿಯಲ್ಲಿ ನಮ್ಮ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. ಚುನಾವಣೆಯಲ್ಲಿ ಜಯಗಳಿಸಿದ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಅಭಿನಂದನೆಗಳುʼʼ ಎಂಬ ಟ್ವೀಟ್ ಅನ್ನು ಈಶ್ವರ ಖಂಡ್ರೆ ಯವರ ಖಾತೆಯಿಂದ ಟ್ವೀಟ್ ಮಾಡಿರುವುದಲ್ಲದೆ, ಜೊತೆಗೆ ಸಂಭ್ರಮಾಚರಣೆಯ ಮೂರು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಅನುಯಾಯಿಗಳು ತಕ್ಷಣ ಈ ವಿಷಯವನ್ನು ಖಂಡ್ರೆಯವರ ಗಮನಕ್ಕೆ ತಂದಿದ್ದು, ʻನನ್ನ ಟ್ವಿಟರ್ ಖಾತೆ ಕೆಲ ಕಿಡಿಗೇಡಿಗಳಿಂದ ಹ್ಯಾಕ್ ಆಗಿದ್ದು, ಕೆಲ ತಪ್ಪುಗಳು ನಡೆದಿವೆ. ಇದರ ವಿರುದ್ಧ ಸೈಬರ್ ಕ್ರೈಂ ನಲ್ಲಿ ದೂರು ನೀಡಲಾಗಿದೆʼ ಎಂದು ಅವರು ಟ್ವೀಟ್ ಮಾಡಿದ್ದಾರೆ.

https://twitter.com/eshwar_khandre/status/1600775922055262208?s=20&t=f1wJT69vUlXOxnxpuFDhdQ
Join Whatsapp
Exit mobile version