ಸೌದಿ ಅರೇಬಿಯಾ, ಜಿದ್ದಾ : ಪಾರ್ಶ್ವವಾಯುನಿಂದ ಬಳಲುತ್ತಿದ್ದ ಮುಂಬಯಿಯ ಅಬ್ದುಲ್ ರಹ್ಮಾನ್ ಎಂಬವರನ್ನು ಊರಿಗೆ ತಲುಪಿಸುವಲ್ಲಿ ಇಂಡಿಯನ್ ಸೋಷಿಯಲ್ ಫೋರಂ ಯಶಸ್ವಿಯಾಗಿದೆ.
ಒಸ್ಫ್ಯಾನ್ ಎಂಬಲ್ಲಿ ವಾಹನದ ರೇಡಿಯೇಟರ್ ದುರಸ್ತಿ ಕೆಲಸ ಮಾಡುತ್ತಿದ್ದ ಅಬ್ದುಲ್ ರಹ್ಮಾನ್ 2 ತಿಂಗಳ ಹಿಂದೆ ಪಾರ್ಶ್ವವಾಯು ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತನ್ನ ದೇಹದ ಬಲ ಭಾಗದ ಚಲನೆಯನ್ನೇ ಕಳೆದುಕೊಂಡಿದ್ದ ಇವರಿಗೆ ಸಂಬಂಧಿಕರ ನೆರವು ತೋಚದ ಕಾರಣ ಜೊತೆಯಾಗಿ ಕೆಲಸ ಮಾಡಿಕೊಂಡಿದ್ದ ಪಾಕಿಸ್ತಾನ ಮೂಲದ ಗೆಳೆಯರು ನೋಡಿಕೊಂಡಿದ್ದರು.
ರೋಗಿಯನ್ನು ಊರಿಗೆ ಕಳುಹಿಸುವ ಸಲುವಾಗಿ ISF ಜೆದ್ದಾ ವೆಲ್ಫೇರ್ ಘಟಕಕ್ಕೆ ಅವರನ್ನು ನೋಡಿಕೊಳ್ಳುತ್ತಿದ್ದ ಆಸಿಮ್ ಕಡೆಯಿಂದ ಬಂದ ಕೋರಿಕೆಯ ಮೇರೆಗೆ ISF ಕಾರ್ಯಕರ್ತ ಅಬ್ದುಲ್ ಹಮೀದ್ ಕೋಡಿ ರವರು ರಹ್ಮಾನ್ ರನ್ನು ತಾಯ್ನಾಡಿಗೆ ಕಳುಹಿಸಿಕೊಡಲು ತಯಾರಾದರು. ಅದರಂತೆ ಇಂಡಿಗೋ ವಿಮಾನದಲ್ಲಿ ISF ಸದಸ್ಯರಾದ ಹಮೀದ್ ಕೋಡಿ ಮತ್ತು ಮನ್ಸೂರ್ ಬಾಂಬಿಲ ರವರ ಜೊತೆ ರೋಗಿಯನ್ನು ಕಳುಹಿಸಿ ಕೊಡಲಾಯಿತು. ರೋಗಿಯನ್ನು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು .