Home ಗಲ್ಫ್ ಸೌದಿಯಲ್ಲಿ ಮೃತಪಟ್ಟ ಬಂಟ್ವಾಳ ಮೂಲದ ವ್ಯಕ್ತಿಯ ಅಂತ್ಯಕ್ರಿಯೆಗೆ ಇಂಡಿಯನ್ ಸೋಶಿಯಲ್ ಫೋರಂ ನೆರವು

ಸೌದಿಯಲ್ಲಿ ಮೃತಪಟ್ಟ ಬಂಟ್ವಾಳ ಮೂಲದ ವ್ಯಕ್ತಿಯ ಅಂತ್ಯಕ್ರಿಯೆಗೆ ಇಂಡಿಯನ್ ಸೋಶಿಯಲ್ ಫೋರಂ ನೆರವು

ರಿಯಾದ್: ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತಪಟ್ಟ ಕರ್ನಾಟಕದ ಬಂಟ್ವಾಳ ಮೂಲದ ವ್ಯಕ್ತಿಯ ಅಂತ್ಯಕ್ರಿಯೆಗೆ ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ನೆರವಾಗಿದೆ.

ಸುಮಾರು 28 ವರ್ಷಗಳಿಂದ ರಿಯಾದಿನಲ್ಲಿರುವ ಖಾಸಗಿ ಕಂಪೆನಿಯೊಂದರಲ್ಲಿ ಚಾಲಕನಾಗಿ ದುಡಿಯುತ್ತಿದ್ದ ಬಂಟ್ವಾಳ ತಾಲೂಕಿನ ಇಸ್ಮಾಯಿಲ್ ಸಯೀದ್ ಪದವು ಎಂಬವರು ಜೂಲೈ 04 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿರುವ ಮೃತದೇಹದ ಅಂತ್ಯಕ್ರಿಯೆ ನೆರವೇರಿಸುವ ಹಿನ್ನೆಲೆಯಲ್ಲಿ ಮೃತರ ಸಂಬಂಧಿಕರಾದ ಮೊಹಮ್ಮದ್ ಅನೀಸ್ ರವರು ಇಂಡಿಯನ್ ಸೋಶಿಯಲ್ ಫೋರಂನ ಸದಸ್ಯರನ್ನು ನೆರವಿಗಾಗಿ ಸಂಪರ್ಕಿಸಿದ್ದರು.

ಇಂಡಿಯನ್ ಸೋಶಿಯಲ್ ಫೋರಂನ ಸಾಭಿತ್ ಬಜ್ಪೆ ಮತ್ತು ಶರೀಫ್ ಬಂಟ್ವಾಳ ರವರ ತಂಡವು ತಕ್ಷಣವೇ ಸ್ಪಂದಿಸಿ ಸೌದಿ ಅರೇಬಿಯಾದ ಕಾನೂನಿನಂತೆ ಸ್ಥಳೀಯ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಇಸ್ಮಾಯಿಲ್ ಸಯೀದ್ ರ ಮರಣ ಸಹಜ ಎಂದು ದೃಢೀಕರಣ ಪತ್ರ ಪಡೆಯಲಾಯಿತು. ಬಳಿಕ ಮೃತದೇಹವನ್ನು ಪಡೆಯುಲು ರಿಯಾದಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಊರಿನಲ್ಲಿರುವ ಮೃತರ ಸಂಬಂಧಿಗಳನ್ನು ಸಂಪರ್ಕಿಸಿ ಮೊಹಮ್ಮದ್ ಅನೀಸ್ ಅಬ್ದುಲ್ ರೆಹ್ಮಾನ್ ರವರ ಹೆಸರಿನಲ್ಲಿ ಅಧಿಕಾರ ಪತ್ರವನ್ನು ಭಾರತೀಯ ರಾಯಭಾರ ಕಚೇರಿಯ ಮೂಲಕ ಪಡೆದು, ಅಂತಿಮವಾಗಿ ಮೃತದೇಹವನ್ನು ಆಸ್ಪತ್ರೆಯಿಂದ ಪಡೆಯಲಾಯಿತು.

ಜೂಲೈ.06 ರಂದು ರಿಯಾದಿನ ಅಲ್ ಜೌಹರ ಅಲ್ ಬಾಬ್ತೇನ್ ಗ್ರಾಂಡ್ ಮಸೀದಿಯಲ್ಲಿ ಮಯ್ಯತ್ ನ ಅಂತಿಮ ವಿಧಿ ವಿಧಾನವನ್ನು ನಿರ್ವಹಿಸಿ, ಎಕ್ಸಿಟ್-4ರಲ್ಲಿರುವ ದಫನಭೂಮಿಯಲ್ಲಿ ಇಂಡಿಯನ್ ಸೋಶಿಯಲ್ ಫೋರಂನ ಸದಸ್ಯರು ಮತ್ತು ಮೃತರ ಆಪ್ತರ ಸಮ್ಮುಖದಲ್ಲಿ ಮಯ್ಯತ್ ನಮಾಜ್ ಮಾಡಿ ದಫನ ಕಾರ್ಯ ನಿರ್ವಹಿಸಲಾಯಿತು.
ಇವರ ಅಕಾಲಿಕ ಮರಣಕ್ಕೆ ಇಂಡಿಯನ್ ಸೋಶಿಯಲ್ ಫೋರಂನ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿಯು ಸಂತಾಪ ಸೂಚಿಸಿದೆ. ಇಂಡಿಯನ್ ಸೋಶಿಯಲ್ ಫೋರಂನ ಈ ಸತ್ಕಾರ್ಯಕ್ಕೆ ಮೃತರ ಸಂಬಂಧಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

Join Whatsapp
Exit mobile version