ಬಹರೈನ್ ನ, ಗುದೈಬಿಯ ಎಂಬಲ್ಲಿ ವಾಸಿಸುತ್ತಿದ್ದ ಬೆಂಗಳೂರು ಮೂಲದ ಆಯಿಷ ಎಂಬವರು ಕ್ಯಾನ್ಸರ್ ಪೀಡಿತರಾಗಿದ್ದು, ರೋಗ ಮುಕ್ತಿಗೊಂಡು ತನ್ನ ತಾಯಿಯ ಜೊತೆ ಸಂಕಷ್ಟ ಜೀವನವನ್ನು ನಡೆಸುತ್ತಾ ಇದ್ದರು.
ರೋಗದಿಂದ ಕೆಲಸ ಕಳೆದುಕೊಡಿದ್ದರಿಂದ ತನ್ನ ಮನೆಯ ಬಾಡಿಗೆಯನ್ನು ಪಾವತಿಸಲು ಸಾಧ್ಯವಾಗದೆ ತಾಯ್ನಾಡಿಗೆ ತೆರಳುವ ವೇಳೆ ಬಹರೈನಿನ ವಿಮಾನ ನಿಲ್ದಾಣದ ಅಧಿಕಾರಿಗಳು ಕುಟುಂಬವನ್ನು ತಡೆದು ಪ್ರಯಾಣ ನಿರ್ಬಂಧವಿರುವ ಬಗ್ಗೆ ತಿಳಿಸುತ್ತಾರೆ.
ತನ್ನ ಸಹೋದ್ಯೋಗಿ ಮೊಬೈಲ್ ಖರೀದಿಗೆ ಆಯಿಷಾಳ ಸಿಪಿಆರ್ (ಗುರುತಿನ ಚೀಟಿ) ಬಳಸಿಕೊಂಡು, ಅದನ್ನು ಮರುಪಾವತಿಸದೆ ತನ್ನ ಊರಿಗೆ ಪಲಾಯನ ಮಾಡಿದರಿಂದ ಪ್ರಯಾಣ ನಿರ್ಬಂಧ ಆಗಿರುವುದು ಗಮನಕ್ಕೆ ಬರುತ್ತದೆ ಮತ್ತು ಸರಿಸುಮಾರು 1500 ಬಹರೈನ್ ದೀನಾರ್ ಪಾವತಿಸಿದರೆ ತಾಯ್ನಾಡಿಗೆ ಮರಳಬಹುದೆಂದು ತಿಳಿಯಸಲಾಯಿತು.
ವಿಷಯವನ್ನು ಅರಿತ ಇಂಡಿಯನ್ ಸೋಷಿಯಲ್ ಫೋರಂ ಬಹರೈನ್ ಕರ್ನಾಟಕ ಘಟಕವು ಆಯಿಷಾಳ ಕುಟುಂಬವನ್ನು ಸಂದರ್ಶಿಸಿ ಅಭಯವನ್ನು ನೀಡಿತಲ್ಲದೆ, ರೋಗಕ್ಕೆ ಸಂಬಂದಿಸಿದ ಔಷಧಿಗಳನ್ನು ನೀಡುದರೊಂದಿಗೆ, ದಾನಿಗಳನ್ನು ಸಂಪರ್ಕಿಸಿ ಪ್ರಯಾಣ ನಿರ್ಬಂಧಕ್ಕೆ ಕಾರಣವಾದ ಮೊತ್ತವನ್ನು ಮತ್ತು ಮನೆ ಬಾಡಿಗೆಯನ್ನು ಸಂಗ್ರಹಿಸಿ ತಾಯಿ ಮತ್ತು ಮಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಲು ನೆರವಾಯಿತು. ಇಂಡಿಯನ್ ಸೋಷಿಯಲ್ ಫೋರಂ ಈ ಕಾರ್ಯವು ಸಾರ್ವಜನಿಕ ಮತ್ತು ಅನಿವಾಸಿ ಭಾರತೀಯ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.