ನಿಮ್ಮ ಮತ ವಂಶ ಪಾರಂಪರ್ಯಕ್ಕೋ? ಸಮಾಜದ ಉನ್ನತಿಗೋ?: ಅಶ್ರಫ್ ಮೌಲವಿ ಪ್ರಶ್ನೆ

Prasthutha|

ಉಳ್ಳಾಲ: ನಿಮ್ಮ ಮತವನ್ನು ಪಾರಂಪರ್ಯವಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ ಗೆ ಮತ ನೀಡಬೇಡಿ, ಸಮುದಾಯದ ಸಬಲೀಕರಣಕ್ಕೆ ಪಣ ತೊಟ್ಟಿರುವ ರಿಯಾಝ್ ಫರಂಗಿಪೇಟೆ ಗೆ ಮತ ನೀಡಿ ಎಂದು SDPI ಕೇರಳ ರಾಜ್ಯಾಧ್ಯಕ್ಷರಾದ ಅಶ್ರಫ್ ಮೌಲವಿ ಮುವಾಟಿಪುಝ ಉಳ್ಳಾಲ ಕ್ಷೇತ್ರದ ಮತದಾರರಲ್ಲಿ ವಿನಂತಿಸಿದ್ದಾರೆ.

- Advertisement -

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಮಂಗಳೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಪರವಾಗಿ ಚುನಾವಣಾ ಪ್ರಚಾರ ಸಭೆ ದೇರಳಕಟ್ಟೆಯಲ್ಲಿ ನಡೆಯಿತು.

SDPI ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಇರ್ಶಾದ್ ಅಜ್ಜಿನಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ SDPI ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ಕಮ್ಯುನಿಟಿ ಕಮ್ಯುನಿಟಿ ಎಂದು ಮಾತಾಡುವ ಯುಟಿ ಖಾದರ್ ಈ ಕ್ಷೇತ್ರದ ಅಲ್ಪಸಂಖ್ಯಾತ ಕಮ್ಯುನಿಟಿ ಗಾಗಿ ಮಾಡಿದ್ದಾದರೂ ಏನು,ನಿಮ್ಮ ಕೊಡುಗೆ ಏನಿದೆ ಎಂದು ಕೇಳಿದರು. SDPI ಮಂಗಳೂರು ವಿಧಾನಸಭಾ ಕ್ಷೇತ್ರ ರಾಷ್ಟ್ರೀಯ ಚುನಾವಣಾ ವೀಕ್ಷಕರಾದ ಎನ್ ಯು ಸಲಾಂ ಪಕ್ಷದ 16 ಅಭ್ಯರ್ಥಿಗಳು ವಿಧಾನಸಭೆಗೆ ಪ್ರವೇಶಿಸಿದ ದಿನದಂದು ಒಂದು ಹೊಸ ಸೂರ್ಯೋದಯ ವಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು. SDPI ಕರ್ನಾಟಕ ರಾಜ್ಯ ಮಾ ಉಸ್ತುವಾರಿ ರಿಯಾಝ್ ಕಡಂಬು ಮೊದಲು ನಿಮ್ಮ ಸಹೋದರ ಇಫ್ತಿಕಾರ್ ನನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿ ಆ ಮೇಲೆ SDPI ಪಕ್ಷದ ಕಾರ್ಯಕರ್ತರಿಗೆ ಬಲೆ ಬೀಸಿ ಎಂದು ಯು ಟಿ ಖಾದರ್ ಗೆ ಚಾಟಿ ಬೀಸಿದರು.

- Advertisement -

SDPI ಮಂಗಳೂರು ವಿಧಾನಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿ ಅತಾವುಲ್ಲಾ ಜೋಕಟ್ಟೆ ಕಾಂಗ್ರೆಸ್ ನ ಗೂಂಡಾಯಿಸಂ ಗೆ SDPI ಕಾರ್ಯಕರ್ತರು ಹೆದರುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದರು.

ಮಂಗಳೂರು ವಿಧಾನಸಭಾ ಕ್ಷೇತ್ರ ಚುನಾವಣಾ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಮಾತನಾಡುತ್ತಾ, ಸಾಮೂಹಿಕ ಸಮಸ್ಯೆಗಳು ಸೃಷ್ಟಿಯಾದಾಗ ಪ್ರತಿಸ್ಪಂದಿಸುವ ಪಕ್ಷ SDPI ಆಗಿದ್ದು, ಈ ಪಕ್ಷದ ವಕ್ತಾರನಾಗಿ ಚುನಾವಣಾ ಕಣದಲ್ಲಿ ಇದ್ದು, ಈ ಬಾರಿ ಮತದಾರರು ನಮ್ಮನ್ನು ಆಶೀರ್ವದಿಸುತ್ತಾರೆ ಎಂಬ ಭರವಸೆ ಇರುವುದಾಗಿ ತಿಳಿಸಿದರು.

ಮುಂದುವರೆಯುತ್ತಾ ಶಾಸಕ ಯು ಟಿ ಖಾದರ್ ಮತ್ತು ಚೇಲಾಗಳ ಗೂಂಡಾಯಿಸಂ ಹದ್ದು ಮೀರುತ್ತಿದ್ದು ಇವರ ಅಧಃಪತನದ ಸಮಯವಾಗಿದೆ ಎಂದು ತಿಳಿಸಿದರು.

ಸೋಲುವ ಭೀತಿಯಿಂದ ರಾತ್ರಿಯ ಕತ್ತಲೆಯಲ್ಲಿ ಶಾಸಕರ ಸಹೋದರ ಹಣ ಹಂಚುತ್ತಿದ್ದು ನಿಮ್ಮ ಹಣ ಪಡೆದವರೂ ನಮಗೆ ಮತ ಹಾಕುತ್ತಾರೆ ನೋಡುತ್ತಿರಿ ಎಂದು ಸವಾಲು ಹಾಕಿದರು.

ಕಾರ್ಯಕ್ರಮದಲ್ಲಿ SDPI ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಫಯಾಜ್ ಮಂಜನಾಡಿ ರವರು ರಾಜಕೀಯ ಜೀವನದಲ್ಲಿ ನಡೆದ ನೈಜ ಘಟನೆಗಳ ಬಗ್ಗೆ ವಿಶ್ಲೇಷಿಸಿದರು