ಮಾರ್ಕೆಟ್‌ನಲ್ಲಿ ನಕಲಿ ಮೊಟ್ಟೆಗಳ ಹೆಚ್ಚಳವಾಗಿದೆ. ಅಸಲಿ ಮೊಟ್ಟೆಗಳಂತೆಯೇ ಕಾಣುವ ಈ ನಕಲಿ ಮೊಟ್ಟೆಗಳ ಸಂಖ್ಯೆ ಹೆಚ್ಚಳಗೊಂಡಿದೆ.
ನಕಲಿ ಮೊಟ್ಟೆ ಗುರುತಿಸುವುದು ಹೇಗೆ
ನಕಲಿ ಮೊಟ್ಟೆಯನ್ನು ಹೊರಗಿನಿಂದ ನೋಡಿ ಗುರುತಿಸೋದು ಕಷ್ಟ. ಜನ ಈ ಮೊಟ್ಟೆಗಳನ್ನು ತೆಗೆದುಕೊಂಡು ಮೋಸ ಹೋಗ್ತಾರೆ. ನಕಲಿ ಮೊಟ್ಟೆಗಳ ಸೇವನೆ ಆರೋಗ್ಯಕ್ಕೂ ಅಪಾಯಕಾರಿ.
ಸ್ಪೆಷಲ್ ಕೆಮಿಕಲ್ಸ್‌ಗಳಿಂದ ಕೆಲವು ಮೊಟ್ಟೆಗಳನ್ನು ತಯಾರಿಸಲಾಗುತ್ತದೆ. ದೇಶದ ಹಲವು ಮಾರ್ಕೆಟ್‌ಗಳಲ್ಲಿ ಈ ನಕಲಿ ಮೊಟ್ಟೆಗಳು ಮಾರಾಟವಾಗುತ್ತಿರುವ ಮಾತುಗಳು ಕೇಳಿ ಬಂದಿವೆ.
ಖರೀದಿ ಅಥವಾ ಅಡುಗೆ ಮಾಡುವ ಸಂದರ್ಭದಲ್ಲಿ ಮೊಟ್ಟೆ ಅಸಲಿಯೋ? ನಕಲಿಯೋ ಎಂಬುದನ್ನು ಪತ್ತೆ ಮಾಡಬಹುದು.
ಅಸಲಿ ಮೊಟ್ಟೆಯ ಚಿಪ್ಪು ಸ್ವಲ್ಪ ಒರಟಾಗಿರುತ್ತದೆ. ಆದರೆ, ಪ್ಲಾಸ್ಟಿಕ್ ಮೊಟ್ಟೆಯ ಚಿಪ್ಪು ಮೃದುವಾಗಿರುತ್ತದೆ. ಈ ಮೂಲಕ ಮೊಟ್ಟೆ ಅಸಲಿಯೋ ಅಥವಾ ನಕಲಿ ಎಂದು ಕಂಡು ಹಿಡಿಯಬಹುದು.
ಪ್ಲಾಸ್ಟಿಕ್ ಮೊಟ್ಟೆ ಅಸಲಿ ಮೊಟ್ಟೆಗಿಂತ ತೂಕದಲ್ಲಿ ತುಂಬಾ ಕಡಿಮೆ ಇರುತ್ತದೆ. ಚೆನ್ನಾಗಿ ಗಮನಿಸಿದರೆ ವ್ಯತ್ಯಾಸ ಗೊತ್ತಾಗುತ್ತೆ. ಹಾಗಾಗಿ, ಇನ್ಮೇಲೆ ಮೊಟ್ಟೆ ತೆಗೆದುಕೊಳ್ಳುವ ಮುಂಚೆ ಜಾಗ್ರತೆಯಿಂದ ಇರಬೇಕು.