ಪ್ರತಿಭಟನೆಗೆ ಸಿದ್ಧತೆ ನಡೆಸುವುದು ಕೂಡ ಕಾನೂನು ಬಾಹಿರವೇ?: ರಿಯಾಝ್ ಕಡಂಬು ಕಿಡಿ

- Advertisement -

ಮಂಗಳೂರು: ಪ್ರತಿಭಟನೆಗೆ ಸಿದ್ಧತೆ ನಡೆಸುವುದು ಕಾನೂನು ಬಾಹಿರ ಎಂದು ಹೇಳುವ ತಮ್ಮ ಸಂವಿಧಾನ ಯಾವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್.ಪಿ ವಿರುದ್ಧ ಎಸ್ ಡಿಪಿಐ ಮುಖಂಡ ರಿಯಾಝ್ ಕಡಂಬು ಕಿಡಿಕಾರಿದ್ದಾರೆ.

- Advertisement -

ರಹೀಂ, ಅಶ್ರಫ್ ಹತ್ಯೆ ಖಂಡಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಜುಲೈ 4ರಂದು ಸಂಜೆ ಕೈಕಂಬ ಜಂಕ್ಷನ್ ನಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನಾ ಸಭೆಗೆ ಪೊಲೀಸ್ ಅನುಮತಿ ನಿರಾಕರಿಸಿದ್ದರೂ, ವಾಟ್ಸಪ್ ಗ್ರೂಪ್ ಗಳಲ್ಲಿ ಪ್ರತಿಭಟನಾ ಸಭೆ ಇದೆಯೆಂದು ಪ್ರಚಾರ ಮಾಡಿರುವ ಆರೋಪದಲ್ಲಿ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿದ್ದರು.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ರಿಯಾಝ್ ಕಡಂಬು, ಮಾನ್ಯ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಅವರೇ ಪ್ರತಿಭಟನೆಗೆ ಸಿದ್ಧತೆ ಮಾಡೋದು ಕಾನೂನು ಬಾಹಿರ ಎಂದು ಹೇಳುವ ತಮ್ಮ ಸಂವಿಧಾನ ಯಾವುದು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಅನುಮತಿಯೇ ಬೇಕಿಲ್ಲಾ. ಸಂವಿಧಾನವನ್ನು ಗಾಳಿಗೆ ತೂರ ಬೇಡಿ.. ನೀವು ನಿಮ್ಮ ಜವಾಬ್ದಾರಿಯನ್ನು ಸಂವಿಧಾನಾತ್ಮಕವಾಗಿ ನಿಭಾಯಿಸಿ. ಪುತ್ತೂರಿನ ಪ್ರಕರಣದಲ್ಲಿ ಆರೋಪಿಯನ್ನು ಅಡಗಿಸಿಟ್ಟಿರುವ ಆರೋಪಿಯ ತಂದೆಯನ್ನು ಈ ವರೆಗೆ ಬಂಧಿಸುವ ದಮ್ಮು ತೋರಿಸಿಲ್ಲ ಯಾಕೆ? ನಿಮ್ಮ ಎಚ್ಚರಿಕೆ, ಕೇಸು ಎಲ್ಲವೂ ಅಲ್ಪಸಂಖ್ಯಾತರೊಂದಿಗೆ ಮಾತ್ರವೇ? ಬಡ ಹಿಂದೂ ಹುಡುಗಿಗೆ ಅತ್ಯಾಚಾರ ಮಾಡಿ ವಂಚಿಸಿ ಗರ್ಭಿಣಿ ಮಾಡಿದ ಎಬಿವಿಪಿ ಕಾರ್ಯಕರ್ತನನ್ನು ಇದುವರೆಗೆ ಬಂಧಿಸಲು ನಿಮ್ಮಿಂದ ಸಾಧ್ಯವಾಗದೆ ಇರುವಾಗ ಅಲ್ಲಿಯೂ ಪ್ರತಿಭಟನೆ ಮಾಡಿದವರ ಮೇಲೆ ಕೇಸ. ಅತ್ಯಾಚಾರ ಮಾಡಿದ ಬಿಜೆಪಿ ನಾಯಕನ ಮಗನನ್ನು ತಾಕತ್ತಿದ್ದರೆ ಬಂಧಿಸಿ,ನೀವು ನಿಮ್ಮ ಬದ್ಧತೆಯನ್ನು ಪ್ರದರ್ಶಿಸಿ ಮಾನ್ಯ ಎಸ್ಪಿ ಅವರೇ! ಅದು ಬಿಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಸಂವಿಧಾನಾತ್ಮಕ ಹಕ್ಕನ್ನು ಕಸಿಯುವ ಅಧಿಕಾರದ ದುರುಪಯೋಗ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಪ್ರಜಾಪ್ರಭುತ್ವ ಸರ್ಕಾರವಿದೆಯೋ ಅಥವಾ ರಾಜ್ಯ ಪೊಲೀಸ್ ರಾಜ್ ಆಗುತ್ತಿದೆಯೋ ಎಂದು ಸಂಶಯ ಹುಟ್ಟುತ್ತಿದೆ ಎಂದು ಹೇಳಿದ್ದಾರೆ.

- Advertisement -


Must Read

Related Articles