Home ಟಾಪ್ ಸುದ್ದಿಗಳು ಸರ್ಕಾರ ಇರುವುದು ಹಿಂದುತ್ವಕ್ಕೆ ಮಾತ್ರವೇ?: ಉವೈಸಿ

ಸರ್ಕಾರ ಇರುವುದು ಹಿಂದುತ್ವಕ್ಕೆ ಮಾತ್ರವೇ?: ಉವೈಸಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಇರುವುದು ಕೇವಲ ಹಿಂದುತ್ವಕ್ಕೆ ಮಾತ್ರವೇ ಎಂದು ಅಖಿಲ ಭಾರತ ಮಜ್ಲಿಸ್‌-ಇ-ಇತ್ತೆಹಾದ್‌ -ಉಲ್‌-ಮುಸ್ಲಿಮೀನ್‌ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ಧೀನ್‌ ಉವೈಸಿ ಪ್ರಶ್ನಿಸಿದ್ದಾರೆ.

ಅಯೋಧ್ಯೆಯ ರಾಮಮಂದಿರ ಹಾಗೂ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ದೇಶದ 17 ಕೋಟಿ ಮುಸ್ಲಿಮರು ಪರಕೀಯರಾದ ಭಾವವನ್ನು ಅನುಭವಿಸುತ್ತಿದ್ದಾರೆ ಎಂದಿದ್ದಾರೆ.

ನಾನು ಮಾರ್ಯಾದ ಪುರುಷೋತ್ತಮ ರಾಮನನ್ನು ಗೌರವಿಸುತ್ತೇನೆ. ಆದರೆ, ನಾಥೂರಾಮ ಗೋಡ್ಸೆ ಅನ್ನು ದ್ವೇಷಿಸುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.

‘ಇಂದು ದೇಶಕ್ಕೆ ಬಾಬಾ ಮೋದಿ ಅವರ ಅಗತ್ಯವಿಲ್ಲ. ಈ ಚರ್ಚೆಗೆ ಸರ್ಕಾರ ಯಾವಾಗ ಉತ್ತರಿಸಲಿದೆ ಎಂದು ನಾನು ಕೇಳಲು ಬಯಸುತ್ತೇನೆ. 140 ಕೋಟಿ ಭಾರತೀಯರ ಮೇಲೆ ಯಾವಾಗ ಗಮನ ಹರಿಸಲಿದೆ ಅಥವಾ ಹಿಂದುತ್ವದ ಮೇಲೆ ಮಾತ್ರವೇ ಎಂದು ಉವೈಸಿ ಪ್ರಶ್ನಿಸಿದ್ದಾರೆ.

Join Whatsapp
Exit mobile version