ಮಂಗಳೂರು: ಇತ್ತೀಚೆಗೆ ಬಿಜೆಪಿ ಪಕ್ಷದ ದ.ಕ.ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ತನ್ನ ಭಾಷಣದಲ್ಲಿ ಹಾಲಿ ಚುನಾವಣೆ ದೇಶಪ್ರೇಮಿ ಗಳಿಗೂ ಮತ್ತು ದೇಶ ದ್ರೋಹಿಗಳ ಮದ್ಯೆ ನಡೆಯುವ ಚುನಾವಣೆ ಎಂದು ಹೇಳಿದ್ದಾರೆ. ಚೌಟ ಜನತೆಗೆ ಉತ್ತರಿಸಲಿ, ಬಹುಕೋಟಿ ಮೊತ್ತದ ಚುನಾವಣಾ ಬಾಂಡ್ ಅಕ್ರಮ, ಚುನಾವಣಾ ಪೂರ್ವ ಪ್ರಮುಖ ರಾಜಕೀಯ ನಾಯಕರ ಬಂಧನ, ಬ್ಯಾಕ್ ಖಾತೆಗಳ ಸ್ಥಗಿತತೆ,ಚುನಾವಣಾ ಆಯುಕ್ತರ ದಿಡೀರ್ ಬದಲಾವಣೆ,ಪೌರತ್ವ ಕಾನೂನುಗಳ ಜಾರಿ, ಭರವಸಿತ ಪ್ರಣಾಳಿಕೆಗಳ ಅನನುಷ್ಟಾನತೆ,ಸರ್ವಾಧಿಕಾರಿ ನೀತಿ, ಜಿಡಿಪಿ ಇಳಿಕೆಗಳೆಲ್ಲವೂ ದೇಶಪ್ರೇಮವನ್ನು ಒಳಗೊಂಡಿದೆಯೆ? ಅಂತ ಉತ್ತರಿಸಲಿ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಕಳೆದ ಮೂರು ದಶಕಗಳಿಂದ ಲೋಕಸಭೆಯಲ್ಲಿ ದ.ಕ.ಜಿಲ್ಲೆಯ ಅಸ್ಮಿತೆಯ ಬಗ್ಗೆ ಒಂದಕ್ಷರವೂ ಪ್ರತಿನಿಧಿಸದ ಈ ಹಿಂದಿನ ಸಂಸದರು, ಈ ಜಿಲ್ಲೆಯನ್ನು ಎಷ್ಟು ಪ್ರಗತಿಗೊಳಿಸಿದ್ದಾರೆ?, ಈ ಜಿಲ್ಲೆಯ ಸಾಮರಸ್ಯವನ್ನು ಹೇಗೆ ನಿಭಾಯಿಸಿದ್ದಾರೆ? ದ.ಕ.ಜಿಲ್ಲೆಗೆ ಪೂರಕವಾಗುವಂತಹ ಅಭಿವೃದ್ದಿ ಯೋಜನೆಗಳು ಕೈತಪ್ಪಲು ಯಾರು ಕಾರಣರು?, ಎಂಬಿತ್ಯಾದಿ ಪ್ರಶ್ನೆಗಳಿಗೆ ಮೊದಲು ಉತ್ತರಿಸಲಿ,ಜಿಲ್ಲೆಯ ನಾಡಿನ ಹೆಮ್ಮೆಯ ಪುತ್ರ ಪದ್ಮರಾಜ್ ಆರ್.ಗೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಚರಿತ್ರೆಯಿರುವ ಭಾರತೀಯ ಕಾಂಗ್ರೆಸ್ ಪಕ್ಷ ಈ ಬಾರಿ ಅಭ್ಯರ್ಥಿತನ ನೀಡಿದೆ. ಪ್ರಗತಿ, ನಾಡು ರಕ್ಷಣೆ,ಸೌಹಾರ್ಧ ಸ್ಥಾಪನೆ,ಅಸ್ಮಿತೆಯ ಸಂರಕ್ಷಣೆಯ ಆಧಾರದಲ್ಲಿ ಜಿಲ್ಲೆಯ ಜನತೆ ಅವರನ್ನು ಲೋಕ ಸಭೆಗೆ ಚುನಾಯಿಸಿ ಕಳುಹಿಸಲಿದ್ದಾರೆ.ಮೂರು ದಶಕಗಳ ನಂತರ ಜಿಲ್ಲೆಯ ಹೆಸರು ಲೋಕಸಭೆಯಲ್ಲಿ ಮೊಳಗಲಿದೆ ಎಂದು ಹೇಳಿದ್ದಾರೆ.