ತೆಹ್ರಾನ್ : ಜರ್ಮನಿ ಗಡಿ ದಾಟುವ ವೇಳೆ ಬೆಲ್ಜಿಯಂನಲ್ಲಿ ಇರಾನಿಯನ್ ರಾಯಭಾರಿ ಅಸ್ಸದೊಲ್ಲಾ ಅಸ್ಸಾದಿ ಅವರನ್ನು ಬಂಧಿಸಿರುವುದಕ್ಕೆ ಇರಾನಿನ ವಿವಿ ಪ್ರೊಫೆಸರ್ ಗಳು, ನ್ಯಾಯವಾದಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಚಿಂತಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಲ್ಜಿಯಂನಲ್ಲಿ ಅಸ್ಸಾದಿ ಬಂಧನ ನಡೆದಿರುವುದು 1961ರ ವಿಯೆನ್ನಾ ಸಮಾವೇಶ ನಿಯಮದ ಪ್ರಕಾರ ರಾಜತಾಂತ್ರಿಕ ಸಂಪ್ರದಾಯ ನಿರ್ವಹಣೆಯ ಸ್ಪಷ್ಟ ಉಲ್ಲಂಘನೆ. ಅಸ್ಸಾದಿ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ವಿಶ್ವಸಂಸ್ಥೆ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಚಿಂತಕರ ಗುಂಪು ಒತ್ತಾಯಿಸಿದೆ.