ಅಣು ತಾಣದ ಮೇಲೆ ದಾಳಿಯ ಮಾತುಕತೆ | ಅಮೆರಿಕಕ್ಕೆ ಇರಾನ್ ಎಚ್ಚರಿಕೆ

Prasthutha|

ವಾಷಿಂಗ್ಟನ್ : ತಮ್ಮ ದೇಶದ ಅಣು ತಾಣದ ಮೇಲೆ ದಾಳಿ ನಡೆಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿಂತಿಸಿದ್ದರೆಂಬ ಮಾಹಿತಿ ಬಹಿರಂಗಗೊಂಡಿರುವುದಕ್ಕೆ, ಇರಾನ್ ಸರಕಾರದ ವಕ್ತಾರ ಅಲಿ ರಬಿಯೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.

- Advertisement -

ಈ ವಿಷಯಕ್ಕೆ ಸಂಬಂಧಿಸಿ ಟ್ರಂಪ್ ಉಪಾಧ್ಯಕ್ಷ ಮೈಕ್ ಪೆನ್ಸ್, ವಿದೇಶಾಂಗ ಸಚಿವ ಮೈಕ್ ಪೊಂಪ್ಯೊ ಮತ್ತು ಸೇನಾ ಮುಖ್ಯಸ್ಥ ಮಾರ್ಕ್ ಮಿಲ್ಲೆ ಅವರೊಂದಿಗೆ ಚರ್ಚೆ ನಡೆಸಿದ್ದ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು.

ಆದರೆ, ಹಿರಿಯ ಅಧಿಕಾರಿಗಳು ಈ ದಾಳಿಯ ಪರವಾಗಿರಲಿಲ್ಲ ಎನ್ನಲಾಗಿದೆ. ಹೀಗಾಗಿ, ಇದೀಗ ಇರಾನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತಮ್ಮ ದೇಶದ ವಿರುದ್ಧ ಯಾವುದೇ ರೀತಿಯ ಸೇನಾ ಕಾರ್ಯಾಚರಣೆಯಾದರೆ, ಕಠಿಣ ಪ್ರತಿಕ್ರಿಯೆ ನೀಡುವುದಾಗಿ ಅಲಿ ರಬಿಯೆ ಎಚ್ಚರಿಸಿದ್ದಾರೆ.

- Advertisement -

ಅಮೆರಿಕ ಜಗತ್ತಿಗೆ ಅಭದ್ರತೆಯನ್ನು ತರುತ್ತದೆ ಎಂದು ತಾನು ಭಾವಿಸುವುದಿಲ್ಲ ಎಂದು ಅಲಿ ಹೇಳಿದ್ದಾರೆ.  

Join Whatsapp