Home ಕರಾವಳಿ ಮಂಗಳೂರು ಡಿಸಿಪಿಯಾಗಿ ಐಪಿಎಸ್ ಅಧಿಕಾರಿ ಅಂಶು ಕುಮಾರ್

ಮಂಗಳೂರು ಡಿಸಿಪಿಯಾಗಿ ಐಪಿಎಸ್ ಅಧಿಕಾರಿ ಅಂಶು ಕುಮಾರ್

ಮಂಗಳೂರು: ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹರಿರಾಂ ಶಂಕರ್ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಐಪಿಎಸ್ ಅಧಿಕಾರಿ ಅಂಶು ಕುಮಾರ್ ಅವರನ್ನು ವರ್ಗಾವಣೆ ಗೊಳಿಸಿ ಸರಕಾರ ಆದೇಶ ಹೊರಡಿಸಿದೆ.


ಅಂಶು ಕುಮಾರ್ ಅವರು ಪ್ರಸ್ತುತ ಉಡಪಿ ಕರಾವಳಿ ಭದ್ರತೆಯ ಎಸ್ ಪಿ ಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಸರಕಾರ ಅವರನ್ನು ಮಂಗಳೂರು ನಗರ ಡಿಸಿಪಿಯಾಗಿ ವರ್ಗಾವಣೆಗೊಳಿಸಿದೆ. ಹರಿರಾಂ ಶಂಕರ್ ಅವರನ್ನು ಹಾಸನ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಳಿಸಲಾಗಿದೆ.

Join Whatsapp
Exit mobile version