ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲಿರುವ ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮುಂಬೈನ ವಾಂಖೆಡೆ ಮೈದಾನದಲ್ಲಿ ಪಾದಾರ್ಪಣಾ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.
ಎರಡೂ ತಂಡಗಳಿಗೂ ಐಪಿಎಲ್’ ಹೊಸ ಸವಾಲಾಗಿದ್ದು, ಹಾರ್ದಿಕ್ ಪಾಂಡ್ಯ ಗುಜರಾತ್ ತಂಡವನ್ನು ಮುನ್ನಡೆಸಲಿದ್ದು, ಕೆ.ಎಲ್ ರಾಹುಲ್ ಲಕ್ನೋ ತಂಡದ ಸಾರಥ್ಯ ವಹಿಸಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿರುವ ಅನುಭವ ಮತ್ತು ಐಪಿಎಲ್’ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ದಾಖಲೆ ಹೊಂದಿರುವ ರಾಹುಲ್ ಒಂದೆಡೆಯಾದರೆ, ನಾಯಕನಾಗಿ ಇದೇ ಮೊದಲ ಬಾರಿ ಕಾಣಿಸಿಕೊಳ್ಳಲಿರುವ ಪಾಂಡ್ಯ, ಗಾಯದ ಕಾರಣದಿಂದಾಗಿ ಕೆಲ ಸಮಯದಿಂದ ಕ್ರಿಕೆಟ್’ನಿಂದ ದೂರ ಉಳಿದಿದ್ದರು. ಹೀಗಾಗಿ ಮೊದಲ ಪಂದ್ಯ ಪಾಂಡ್ಯ ಪಾಲಿಗೆ ಹೆಚ್ಚಿನ ಸವಾಲಿನದ್ದಾಗಿರಲಿದೆ.
ಲಕ್ನೋ ಸೂಪರ್ ಜೈಂಟ್ಸ್ ಬಲಾಬಲ
ಕ್ವಿಂಟನ್ ಡಿ ಕಾಕ್ ಮತ್ತು ಕೆಎಲ್ ರಾಹುಲ್ ಜೋಡಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಬ್ಯಾಟರ್‌ಗಳಾದ ಮನೀಶ್ ಪಾಂಡೆ, ಆಲ್’ರೌಂಡರ್‌ಗಳಾದ ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ವೇಗಿ ಅವೇಶ್ ಖಾನ್ ಮತ್ತು ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರಂತಹ ಭಾರತೀಯ ಆಟಗಾರರನ್ನು ಹೊಂದಿದೆ.
ಗುಜರಾತ್ ಸಂಭವಿನೀಯ ತಂಡ
ಶುಭ್‌ಮನ್ ಗಿಲ್, ರೆಹಮನುಲ್ಲಾ ಗುರ್ಬಜ್, ಅಭಿನವ್ ಮನೋಹರ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಹಾರ್ದಿಕ್ ಪಾಂಡ್ಯ, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫಗ್ರ್ಯೂಸನ್, ಸಾಯಿ ಕಿಶೋರ್
ಸ್ಥಳ: ಮುಂಬೈ, ವಾಂಖೆಡೆ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ,