Home ಕ್ರೀಡೆ ಐಪಿಎಲ್ 2022 | ಬೆಂಗಳೂರು ಗೆಲುವಿಗೆ 129 ರನ್’ಗಳ ಸುಲಭ ಗುರಿ

ಐಪಿಎಲ್ 2022 | ಬೆಂಗಳೂರು ಗೆಲುವಿಗೆ 129 ರನ್’ಗಳ ಸುಲಭ ಗುರಿ

ಮುಂಬೈ: ಐಪಿಎಲ್ 15ನೇ ಆವೃತ್ತಿಯ ತನ್ನ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪಡೆಯನ್ನು 128 ರನ್’ಗಳಿಗೆ ನಿಯಂತ್ರಿಸುವಲ್ಲಿ ಆರ್ ಸಿಬಿ ಬೌಲರ್‌ಗಳು ಯಶಸ್ವಿಯಾಗಿದ್ದಾರೆ.
ಬಿಗು ಬೌಲಿಂಗ್ ದಾಳಿ ಸಂಘಟಿಸಿದ ಸ್ಪಿನ್ನರ್ ವಾನಿಂದು ಹಸರಂಗ, ತನ್ನ 4 ಓವರ್‌ಗಳ ದಾಳಿಯಲ್ಲಿ 20 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.
ಕೆಕೆಆರ್ ಪರ 25 ರನ್’ಗಳಿಸಿದ ಆಂಡ್ರೆ ರಸೆಲ್ ಟಾಪ್ ಸ್ಕೋರರ್ ಎನಿಸಿದರು. ಉಳಿದಂತೆ ಉಮೇಶ್ ಯಾದವ್ 18, ನಾಯಕ ಶ್ರೇಯಸ್ ಅಯ್ಯರ್ 13, ನಿತೀಶ್ ರಾಣಾ 10, ಸುನಿಲ್ ನರೇನ್ 12, ಹಾಗೂ ಸ್ಯಾಮ್ ಬಿಲ್ಲಿಂಗ್ಸ್ 14 ರನ್’ಗಳಿಸುವಷ್ಟರಲ್ಲೇ ನಿರ್ಗಮಿಸಿದರು.
ಆಕಾಶ್ ದೀಪ್ 3, ಹರ್ಷಲ್ ಪಟೇಲ್ 2 ವಿಕೆಟ್ ಪಡೆದರೆ, ಸಿರಾಜ್ ಆರಂಭಿಕ ಅಜಿಂಕ್ಯಾ ರಹಾನೆ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಮೊದಲ ಪಂದ್ಯದಲ್ಲಿ 205 ರನ್ ಗಳಿಸಿಯೂ ಪಂಜಾಬ್ ಕಿಂಗ್ಸ್’ಗೆ ಶರಣಾಗಿದ್ದ ಫಾಫ್ ಡುಪ್ಲೆಸ್ಸಿ ಪಡೆ, ಇಂದಿನ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸುವ ನಿರೀಕ್ಷೆ ಇದೆ.

Join Whatsapp
Exit mobile version