ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್, IPL-2022ನೇ ಆವೃತ್ತಿಯಲ್ಲಿ ಪಾಲ್ಗೊಳ್ಳುವ ಆಟಗಾರರ ಆಯ್ಕೆಗಾಗಿ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದ ಮೆಗಾ ಹರಾಜು ಪ್ರಕ್ರಿಯೆಗೆ ತೆರೆಬಿದ್ದಿದೆ.
67 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 204 ಆಟಗಾರರು ಹರಾಜಿನಲ್ಲಿ ಮಾರಾಟವಾಗಿದ್ದಾರೆ. 10 ತಂಡಗಳು ಒಟ್ಟು 5,51,70,00,000 ಮೊತ್ತವನ್ನು ವ್ಯಯಿಸಿವೆ.
ಶನಿವಾರ ಮತ್ತು ಭಾನುವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಎಲ್ಲರ ನಿರೀಕ್ಷೆ ಹಾಗೂ ಊಹೆಗಳನ್ನು ತಲೆಕೆಳಗಾಗಿಸಿ 10 ಫ್ರಾಂಚೈಸಿ’ಗಳು ಬಲಿಷ್ಠ ತಂಡ ಕಟ್ಟುವ ಪ್ರಯತ್ನವನ್ನು ಮಾಡಿದೆ.
10 ತಂಡಗಳ ಆಟಗಾರರ ಪಟ್ಟಿ, ವ್ಯಯಿಸಿದ ಮೊತ್ತ ಹಾಗೂ ಪರ್ಸ್’ನಲ್ಲಿ ಬಾಕಿ ಉಳಿಕೊಂಡಿರುವ ಮೊತ್ತಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ.
- ರಾಯಲ್ ಚಾಲೆಂಜರ್ಸ್ ಬೆಂಗಳೂರು
ಒಟ್ಟು ಆಟಗಾರರು: 19
ವ್ಯಯಿಸಿದ ಮೊತ್ತ: 85.50 ಕೋಟಿ ರೂಪಾಯಿ
ಪರ್ಸ್’ನಲ್ಲಿ ಬಾಕಿ ಉಳಿಸಿಕೊಂಡ ಮೊತ್ತ:4.50 ಕೋಟಿ ರೂಪಾಯಿ
- ಚೆನ್ನೈ ಸೂಪರ್ ಕಿಂಗ್ಸ್
ಒಟ್ಟು ಆಟಗಾರರು: 25
ವ್ಯಯಿಸಿದ ಮೊತ್ತ: 87.05 ಕೋಟಿ ರೂಪಾಯಿ
ಪರ್ಸ್’ನಲ್ಲಿ ಬಾಕಿ ಉಳಿಸಿಕೊಂಡ ಮೊತ್ತ: 2.95 ಕೋಟಿ ರೂಪಾಯಿ
- ಕೋಲ್ಕತ್ತಾ ನೈಟ್ ರೈಡರ್ಸ್.
ಒಟ್ಟು ಆಟಗಾರರು: 22
ವ್ಯಯಿಸಿದ ಮೊತ್ತ: 86.35 ಕೋಟಿ ರೂಪಾಯಿ
ಪರ್ಸ್’ನಲ್ಲಿ ಬಾಕಿ ಉಳಿಸಿಕೊಂಡ ಮೊತ್ತ: 3.65 ಕೋಟಿ ರೂಪಾಯಿ
- ಪಂಜಾಬ್ ಕಿಂಗ್ಸ್.
ಒಟ್ಟು ಆಟಗಾರರು: 25
ವ್ಯಯಿಸಿದ ಮೊತ್ತ: 86.55 ಕೋಟಿ ರೂಪಾಯಿ
ಪರ್ಸ್’ನಲ್ಲಿ ಬಾಕಿ ಉಳಿಸಿಕೊಂಡ ಮೊತ್ತ: 3.45 ಕೋಟಿ ರೂಪಾಯಿ
- ಡೆಲ್ಲಿ ಕ್ಯಾಪಿಟಲ್ಸ್.
ಒಟ್ಟು ಆಟಗಾರರು: 23
ವ್ಯಯಿಸಿದ ಮೊತ್ತ: 89.70 ಕೋಟಿ ರೂಪಾಯಿ
ಪರ್ಸ್’ನಲ್ಲಿ ಬಾಕಿ ಉಳಿಸಿಕೊಂಡ ಮೊತ್ತ: 30 ಲಕ್ಷ ರೂಪಾಯಿ.
- ರಾಜಸ್ಥಾನ ರಾಯಲ್ಸ್
ಒಟ್ಟು ಆಟಗಾರರು: 20
ವ್ಯಯಿಸಿದ ಮೊತ್ತ: 83.80 ಕೋಟಿ ರೂಪಾಯಿ
ಪರ್ಸ್’ನಲ್ಲಿ ಬಾಕಿ ಉಳಿಸಿಕೊಂಡ ಮೊತ್ತ: 6.20 ಕೋಟಿ ರೂಪಾಯಿ.
- ಮುಂಬೈ ಇಂಡಿಯನ್ಸ್
ಒಟ್ಟು ಆಟಗಾರರು: 23
ವ್ಯಯಿಸಿದ ಮೊತ್ತ: 88.95 ಕೋಟಿ ರೂಪಾಯಿ
ಪರ್ಸ್’ನಲ್ಲಿ ಬಾಕಿ ಉಳಿಸಿಕೊಂಡ ಮೊತ್ತ: 1.05 ಕೋಟಿ ರೂಪಾಯಿ.
- ಸನ್ ರೈಸರ್ಸ್ ಹೈದರಾಬಾದ್.
ಒಟ್ಟು ಆಟಗಾರರು: 23
ವ್ಯಯಿಸಿದ ಮೊತ್ತ: 89.90 ಕೋಟಿ ರೂಪಾಯಿ
ಪರ್ಸ್’ನಲ್ಲಿ ಬಾಕಿ ಉಳಿಸಿಕೊಂಡ ಮೊತ್ತ: 10 ಲಕ್ಷ ರೂಪಾಯಿ ರೂಪಾಯಿ.
- ಲಕ್ನೋ ಸೂಪರ್ ಜಯಂಟ್ಸ್.
ಒಟ್ಟು ಆಟಗಾರರು: 21
ವ್ಯಯಿಸಿದ ಮೊತ್ತ: 90.00 ಕೋಟಿ ರೂಪಾಯಿ
ಪರ್ಸ್’ನಲ್ಲಿ ಬಾಕಿ ಉಳಿಸಿಕೊಂಡ ಮೊತ್ತ: 00.00 ರೂಪಾಯಿ.
- ಗುಜರಾತ್ ಟೈಟನ್ಸ್.
ಒಟ್ಟು ಆಟಗಾರರು: 22
ವ್ಯಯಿಸಿದ ಮೊತ್ತ: 89.65 ಕೋಟಿ ರೂಪಾಯಿ
ಪರ್ಸ್’ನಲ್ಲಿ ಬಾಕಿ ಉಳಿಸಿಕೊಂಡ ಮೊತ್ತ: 35 ಲಕ್ಷ ರೂಪಾಯಿ.