Home ಮಾಹಿತಿ ಭಾರತದಿಂದ ಐಫೋನ್ ರಫ್ತು ಗಣನೀಯ ಹೆಚ್ಚಳ..!

ಭಾರತದಿಂದ ಐಫೋನ್ ರಫ್ತು ಗಣನೀಯ ಹೆಚ್ಚಳ..!

ನವದೆಹಲಿ: ಅಮೆರಿಕದ ಆ್ಯಪಲ್ ಸಂಸ್ಥೆ ಭಾರತದಲ್ಲಿ ತನ್ನ ಉತ್ಪನ್ನಗಳ ತಯಾರಿಕೆಯ ಕೆಲಸವನ್ನು ತೀವ್ರಗೊಳಿಸಿದೆ. ಪರಿಣಾಮವಾಗಿ ಚೀನಾದ ಮೇಲಿನ ಅವಲಂಬನೆಯನ್ನು ಆ್ಯಪಲ್ ನಿಧಾನವಾಗಿ ಕಡಿಮೆ ಮಾಡಿಕೊಳ್ಳುತ್ತಿದೆ.


ವರದಿ ಪ್ರಕಾರ, ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗಿನ ಅರ್ಧ ವರ್ಷದಲ್ಲಿ 6 ಬಿಲಿಯನ್ ಡಾಲರ್ ಮೌಲ್ಯದ ಮೇಡ್ ಇನ್ ಇಂಡಿಯಾ ಐಫೋನ್ ಗಳನ್ನು ಆ್ಯಪಲ್ ಸಂಸ್ಥೆ ರಫ್ತು ಮಾಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಮೂರು ಪಟ್ಟು ಹೆಚ್ಚಾಗಿದೆ.


ಅಂದರೆ, ಭಾರತದಲ್ಲಿ ಐಫೋನ್ ತಯಾರಿಕೆ ಹೆಚ್ಚುತ್ತಿರುವ ವೇಗ ಬಹಳ ಹೆಚ್ಚಿದೆ. ಅಂದಾಜು ಪ್ರಕಾರ ಈ ಹಣಕಾಸು ವರ್ಷದಲ್ಲಿ ಮೇಡ್ ಇನ್ ಇಂಡಿಯಾ ಐಫೋನ್ ಗಳ ರಫ್ತು 10 ಬಿಲಿಯನ್ ಡಾಲರ್ ದಾಟಬಹುದು ಎನ್ನಲಾಗಿದೆ.


ಆ್ಯಪಲ್ ಸಂಸ್ಥೆಯ ಉತ್ಪನ್ನಗಳನ್ನು ಭಾರತದಲ್ಲಿ ಮೂರು ಕಂಪನಿಗಳು ತಯಾರಿಸಿಕೊಡುತ್ತವೆ. ಫಾಕ್ಸ್ ಕಾನ್, ಪೆಗಾಟ್ರಾನ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಗಳಿಂದ ಐಫೋನ್ ಗಳ ಅಂತಿಮ ಅಸೆಂಬ್ಲಿಂಗ್ ನಡೆಯುತ್ತದೆ. ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ 6 ಬಿಲಿಯನ್ ಡಾಲರ್ ಮೊತ್ತದ ಐಫೋನ್ ಗಳನ್ನು ರಫ್ತು ಮಾಡಲಾಗಿದೆ. ಇದರಲ್ಲಿ ಅರ್ಧದಷ್ಟು ಉತ್ಪಾದನೆಯನ್ನು ಫಾಕ್ಸ್ ಕಾನ್ ಸಂಸ್ಥೆ ಮಾಡುತ್ತದೆ.


ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಿಂದ 1.7 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ ಗಳ ರಫ್ತಾಗಿದೆ. ಟಾಟಾ ವೈಶಿಷ್ಟ್ಯತೆ ಎಂದರೆ, ಐಫೋನ್ ಅನ್ನು ತಯಾರಿಸುತ್ತಿರುವ ಮೊದಲ ಹಾಗೂ ಏಕೈಕ ಭಾರತೀಯ ಕಂಪನಿ ಎನಿಸಿದೆ. ಫಾಕ್ಸ್ ಕಾನ್, ಪೆಗಾಟ್ರಾನ್ ಕಂಪನಿಗಳು ತೈವಾನ್ ದೇಶದ ಮೂಲದವಾಗಿವೆ.

Join Whatsapp
Exit mobile version