ಬೆಂಗಳೂರು: ಬಿಜೆಪಿ ಆಡಳಿತ ಅವಧಿಯಲ್ಲಿನ ಎಲ್ಲ ಹಗರಣಗಳನ್ನು ತನಿಖೆ ಮಾಡಿಸುತ್ತೇವೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಹಗರಣ, ನೀರಾವರಿ ಇಲಾಖೆ, ಗುತ್ತಿಗೆದಾರರ ಕೇಸ್, ಎಲ್ಲ ಕೇಸ್ ಗಳ ತನಿಖೆ ಮಾಡಿಸುತ್ತೇವೆ. ಅಧಿಕಾರಿಗಳು, ಸಚಿವರೇ ಇರಲಿ ತನಿಖೆ ನಡೆಸಿ ಶಿಕ್ಷೆ ಕೊಡಿಸುತ್ತೇವೆ ಎಂದರು.