Home ಟಾಪ್ ಸುದ್ದಿಗಳು ಮಣಿಪುರದಲ್ಲಿ ಇಂಟರ್ ನೆಟ್ ನಿರ್ಬಂಧ ತೆರವು: ಮುಖ್ಯಮಂತ್ರಿ ಬಿರೇನ್ ಸಿಂಗ್

ಮಣಿಪುರದಲ್ಲಿ ಇಂಟರ್ ನೆಟ್ ನಿರ್ಬಂಧ ತೆರವು: ಮುಖ್ಯಮಂತ್ರಿ ಬಿರೇನ್ ಸಿಂಗ್

ಇಂಫಾಲ್: ಮಣಿಪುರ ಹಿಂಸಾಚಾರದಿಂದ ಅಲ್ಲಿನ ಇಂಟರ್ನೆಟ್ ವ್ಯವಸ್ಥೆಯನ್ನು ನಿರ್ಬಂಧ ಮಾಡಲಾಗಿತ್ತು. ಇದೀಗ ರಾಜ್ಯ ಯಥಾಸ್ಥಿತಿಗೆ ಬಂದ ಕಾರಣ ಈ ನಿರ್ಬಂಧವನ್ನು ತೆರವು ಮಾಡಲಾಗಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹೇಳಿದ್ದಾರೆ.

ಮೇ 3ರಂದು ಜನಾಂಗೀಯ ಘರ್ಷಣೆಗಳು ಭುಗಿಲೆದ್ದು, ನಂತರ ಅದು ವಿಕೋಪಕ್ಕೆ ಹೋಗಿ ಹಲವು ಅಹಿತಕರ ಘಟನೆಗಳು ನಡೆದು ಇಡೀ ರಾಜ್ಯವೇ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಅಲ್ಲಿನ ಅನೇಕರು ಮನೆ-ಪ್ರಾಣ ಎಲ್ಲವನ್ನು ಕಳೆದುಕೊಂಡಿದ್ದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಮಣಿಪುರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಮತ್ತೆ ಹಿಂಸಾಚಾರಕ್ಕೆ ಕಾರಣವಾಗುತ್ತಿತ್ತು. ಈ ಪುಕಾರುಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಇಂಟರ್ನೆಟ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಮಣಿಪುರ ಯಥಾಸ್ಥಿತಿಗೆ ಬಂದ ಕಾರಣ ಈ ಕ್ರಮವನ್ನು ತೆರವುಗೊಳಿಸಲಾಗಿದೆ.

Join Whatsapp
Exit mobile version