Home ಟಾಪ್ ಸುದ್ದಿಗಳು ರಾಜ್ಯಾದ್ಯಂತ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ರಾಜ್ಯಾದ್ಯಂತ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಬೆಂಗಳೂರು: ಇಂದು (ಜೂ.21) ರಾಜ್ಯಾದ್ಯಂತ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ ಹಾಗೂ ಆರೋಗ್ಯ ಕುಟುಂಬ ಇಲಾಖೆ ವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ 9 ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ವಸುದೈವ ಕುಟಂಬಂ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು.
ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಯೋಗ ವಿನ್ಯಾಸದ ಪೋಸ್ಟರ್ ಬಿಡುಗಡೆ ಮಾಡಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ನಮ್ಮ ಸಂಸ್ಕೃತಿಯಲ್ಲಿ ಯೋಗ ಇದೆ. ಹಳೆಯ ಗ್ರಂಥಗಳಲ್ಲೂ ಉಲ್ಲೇಖ ಇದೆ. ಯೋಗವು ದೇಹ, ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುವಂತೆ ಮನವಿ ಮಾಡಿದರು. ಈ ನಿರ್ಣಯಕ್ಕೆ ನೂರಾರು ದೇಶಗಳು ಬೆಂಬಲಿಸಿ ಯೋಗ ದಿನ ಆಚರಿಸುತ್ತಿವೆ. ಯೋಗದ ಮೂಲಕ ಮನುಕುಲವನ್ನು ಬೆಸೆಯಬೇಕಾಗಿದೆ ಎಂದು ತಿಳಿಸಿದರು. ಶಾಲೆಗಳಲ್ಲಿ ಯೋಗವನ್ನು ಅಳವಡಿಸುವ ಅಗತ್ಯವಿದೆ ಎಂದರು.


ಯೋಗಾ ನಿಮ್ಮ ಬದುಕಿನಲ್ಲಿ ಒಂದು ಅಂಗವಾಗಿ ಉಳಿಯಲಿ. ಶಾಲೆಗಳಲ್ಲಿ ಯೋಗವನ್ನು ಅಳವಡಿಸುವ ಅಗತ್ಯವಿದೆ. ಯೋಗಾ ಋಷಿ ಮುನಿಗಳು ದೇಶಕ್ಕೆ ಕೊಟ್ಟ ಕೊಡುಗೆ. ಎಲ್ಲ ರೋಗಕ್ಕೆ ಮದ್ದಿದೆ, ಮಾನಸಿಕ ರೋಗಕ್ಕೆ ಮದ್ದು ಇಲ್ಲ. ಒತ್ತಡದ ಬದುಕಿಗೆ ಯೊಗಾಭ್ಯಾಸ ಅತ್ಯಗತ್ಯ. ದಷ್ಚಟ ಮತ್ತು ರೋಗಕ್ಕೆ ಯೋಗವೇ ಮದ್ದು. ಶಾಲೆಗಳಲ್ಲಿ ಯೋಗ ಅಳವಡಿಸುವುದು ಅಗತ್ಯ. ಯೋಗಾಕ್ಕೆ ಒಂದು ಸಿಲೆಬಸ್ ಮಾಡಿ ಮಕ್ಕಳಿಗೆ ಅರಿವು ಮೂಡಿಸಬೇಕು. ವೇದಿಕೆ ಮೇಲೆ ಇದ್ದ ಸಚಿವರಿಗೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಮನವಿ ಮಾಡಿದರು.

Join Whatsapp
Exit mobile version