ರಾಂಚಿ: ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಪ್ರಶಾಂತ್ ಕುಮಾರ್ ಸಿನ್ಹಾರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಮಾಜಿ ಗೆಳತಿ ಕಾಜಲ್ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಶಾಂತ್ ಕುಮಾರ್ ಸಿನ್ಹಾ ಹತ್ಯೆ ಮಾಡಿ ಬಳಿಕ ಶವವನ್ನು ಜಾರ್ಖಂಡ್‌ನ ಹಜಾರಿಬಾಗ್‌ನ ಛದ್ವಾ ಸೇತುವೆಯ ಕೆಳಗೆ ಎಸೆಯಲಾಗಿತ್ತು.
ಪ್ರಶಾಂತ್ ಜೊತೆ ತನ್ನ ಸ್ನೇಹವನ್ನು ಕೊನೆಗೊಳಿಸಿದರೂ, ತನ್ನೊಂದಿಗೆ ಇದ್ದ ಫೋಟೋಗಳು ಮತ್ತು ಖಾಸಗಿ ವೀಡಿಯೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು. ಆದ್ದರಿಂದ ಕೊಲ್ಲಬೇಕಾಯಿತು ಎಂದು ಬಂಧಿತೆ ಕಾಜಲ್ ಪೊಲೀಸರಿಗೆ ತಿಳಿಸಿದ್ದಾಳೆ.
ಮಾರ್ಚ್ 11 ರಿಂದ ನಾಪತ್ತೆಯಾಗಿದ್ದ ಅಂತರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ, ಬಿರ್ಸಾನಗರ ನಿವಾಸಿ ಪ್ರಶಾಂತ್ ಕುಮಾರ್ ಸಿನ್ಹಾ ಅವರ ಮೃತದೇಹ ಹಜಾರಿಬಾಗ್ ಜಿಲ್ಲೆಯ ಛದ್ವಾ ಅಣೆಕಟ್ಟಿನ ಸೇತುವೆ ಕೆಳಗೆ ಶನಿವಾರ ಗೋಣಿಚೀಲದಲ್ಲಿ ಪತ್ತೆಯಾಗಿತ್ತು.
ಪ್ರಶಾಂತ್‌ನ ಮಾಜಿ ಗೆಳತಿ ಕಾಜಲ್ ತನ್ನ ಹೊಸ ಪ್ರೇಮಿ ರೌನಕ್ ಕುಮಾರ್ ಸಹಾಯದಿಂದ ಪ್ರಶಾಂತ್‌ನನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ