Home ಟಾಪ್ ಸುದ್ದಿಗಳು ಅಂತಾರಾಷ್ಟ್ರೀಯ ಕಚ್ಚಾ ತೈಲ ದರ 3 ವರ್ಷದಲ್ಲಿ ಗರಿಷ್ಠ ಮಟ್ಟಕ್ಕೆ ಇಳಿಕೆ!

ಅಂತಾರಾಷ್ಟ್ರೀಯ ಕಚ್ಚಾ ತೈಲ ದರ 3 ವರ್ಷದಲ್ಲಿ ಗರಿಷ್ಠ ಮಟ್ಟಕ್ಕೆ ಇಳಿಕೆ!

ಜಾಗತಿಕ ಕಚ್ಚಾ ತೈಲ ದರವು ಮೂರು ವರ್ಷದಲ್ಲಿ ಗರಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. ಕೆಲವು ದಿನಗಳ ಹಿಂದೆ ಬ್ಯಾರೆಲ್‌ಗೆ 85 ಯುಎಸ್‌ಡಿ ಇತ್ತು. ಆದರೆ ಈಗ ಜಾಗತಿಕ ಕಚ್ಚಾ ತೈಲ ಬೆಲೆಯು ಬ್ಯಾರೆಲ್‌ಗೆ 83 ಡಾಲರ್‌ಗೆ ಕುಸಿದಿದ್ದು ಇದು ಮೂರು ವರ್ಷದಲ್ಲಿ ಗರಿಷ್ಠ ಮಟ್ಟದ ಇಳಿಕೆಯಾಗಿದೆ.

ದೇಶದಲ್ಲಿ ನಿರಂತರವಾಗಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರವು ಏರುತ್ತಿದ್ದವು. ಕೇವಲ 45 ದಿನಗಳಲ್ಲಿ 30 ಬಾರಿ ಬಾರಿ ಏರಿಕೆಯಾಗಿತ್ತು. ಕೇಂದ್ರ ಸರ್ಕಾರವು ಇತ್ತೀಚೆಗೆ ಪೆಟ್ರೋಲ್‌ ಹಾಗೂ ಡಿಸೇಲ್‌ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದೆ. ಕೇಂದ್ರ ಸರ್ಕಾರವು ಪೆಟ್ರೋಲ್ 5 ರೂ, ಹಾಗೂ ಡೀಸೆಲ್ ಮೇಲೆ 10 ರೂಪಾಯಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ. 5 ದಿವಸಗಳಿಂದ ಬೆಲೆಯು ಸ್ಥಿರವಾಗಿದೆ.

ಸರ್ಕಾರವು ಮಾರ್ಚ್ ತಿಂಗಳಿನಲ್ಲಿ ಹಾಗೂ ಮೇ ತಿಂಗಳಿನಲ್ಲಿ ಪೆಟ್ರೋಲ್‌ ಹಾಗೂ ಡಿಸೇಲ್‌ ಮೇಲಿನ ಅಬಕಾರಿ ಸುಂಕವನ್ನು ಪರಿಷ್ಕರಣೆ ಮಾಡಿದೆ. ಈ ಮೂಲಕ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವು ತೀವ್ರ ಪ್ರಮಾಣದಲ್ಲಿ ಏರಿಕೆ ಆಗಿತ್ತು. ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿತ ಮಾಡುವ ಮುನ್ನ 45 ದಿನಗಳಲ್ಲಿ 30 ಬಾರಿ ಡಿಸೇಲ್ ‌ದರವು ಏರಿಕೆಯನ್ನು ಮಾಡಿದ್ದರೆ ಪೆಟ್ರೋಲ್‌ ಬೆಲೆಯನ್ನು 41 ದಿನಗಳಲ್ಲಿ 28 ಬಾರಿ ಏರಿಕೆಯ ಮಾಡಿತ್ತು. ಇದೀಗ ದರ ಕಡಿಮೆಯಾದ ಬಳಿಕ ದೆಹಲಿಯಲ್ಲಿ ಪೆಟ್ರೋಲ್‌ ದರವು ಲೀಟರ್‌ಗೆ 103.97 ರೂಪಾಯಿ ಹಾಗೂ ಡೀಸೆಲ್‌ ಲೀಟರ್‌ ಗೆ 86.67 ರೂಪಾಯಿ ಆಗಿದೆ. ಮುಂಬೈನಲ್ಲಿ ಪೆಟ್ರೋಲ್‌ 109.98 ರೂ. ಆಗಿದ್ದು, ಡೀಸೆಲ್‌ ಬೆಲೆಯು ಲೀಟರ್‌ಗೆ 94.14 ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್‌ ಬೆಲೆಯು 104.67 ರೂ. ಮತ್ತು ಡಿಸೇಲ್‌ ಬೆಲೆ 89.79 ರೂ. ಆಗಿದೆ.

ಅಂತಾರಾಷ್ಟ್ರಿಯ ಕಚ್ಚಾ ತೈಲಬೆಲೆ 105 ಡಾಲರಿಂದ ರಿಂದ 135 ಡಾಲರ್ ತನಕ ಇದ್ದಾಗ ಯುಪಿಎ ಸರಕಾರದ ಅವಧಿಗಳಲ್ಲಿ 70 ರೂ. ಆಸುಪಾಸಲ್ಲಿ ಪೆಟ್ರೋಲ್ ಮತ್ತು 55 ರೂ. ಆಸುಪಾಸಲ್ಲಿ ಡೀಸೆಲ್ ದೊರೆಯುತ್ತಿತ್ತು. ಹೀಗೆ ಬೆಲೆ ಏರಿದರೆ ಏನು ಮಾಡೋದು, ಜನರು ಸಾಯಬೇಕಾ, ಕರುಣಾಹೀನ ಸರಕಾರ ದು ಹೇಳುತ್ತಿದ್ದ ಮೋದಿಯವರು ವಿಪರೀತವಾಗಿ ಇಂಧನಮೇಲಿನ ತೆರಿಗೆಗಳನ್ನು ಹೆಚ್ಚಿಸುತ್ತಾ ಹೋದ ಪರಿಣಾಮ ಪ್ರಸ್ತುತ ದರವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 60 ಡಾಲರ್ಗಿಂತಲೂ ಬೆಲೆ ಕುಸಿದಿತ್ತು. ಈಗ 83 ಡಾಲರ್ ಇದೆ. ಹಿಂದಿನ ಯುಪಿಎ ಸರಕಾರಕ್ಕೆ ಹೋಲಿಸಿದರೆ ಈಗಲೂ ಅತಿಯಾದ ತೆರಿಗೆ ಇಂಧನ ಮೇಲೆ ಇದ್ದು 60 ರೂಪಾಯಿಗೆ ಸಿಗಬೇಕಾದ ಪೆಟ್ರೋಲ್ ಶತಕ ದಾಡಿಯೇ ಇದೆ.

Join Whatsapp
Exit mobile version