Home ಟಾಪ್ ಸುದ್ದಿಗಳು ನರಮೇಧ ನಿಲ್ಲಿಸಲು ಇಸ್ರೇಲ್‌ಗೆ ಖಡಕ್ ಸೂಚನೆ ನೀಡಿದ ಅಂತಾರಾಷ್ಟ್ರೀಯ ನ್ಯಾಯಾಲಯ

ನರಮೇಧ ನಿಲ್ಲಿಸಲು ಇಸ್ರೇಲ್‌ಗೆ ಖಡಕ್ ಸೂಚನೆ ನೀಡಿದ ಅಂತಾರಾಷ್ಟ್ರೀಯ ನ್ಯಾಯಾಲಯ

ನೆದರ್‌ಲ್ಯಾಂಡ್ಸ್: ಅಂತಾರಾಷ್ಟ್ರೀಯ ನ್ಯಾಯಾಲಯ ಬಹು ನಿರೀಕ್ಷಿತ ತೀರ್ಪು ನೀಡಿದ್ದು, ಗಾಝಾದಲ್ಲಿ ನರಮೇಧ ತಡೆಯಲು ಕ್ರಮ ಕೈಗೊಳ್ಳಲು ಇಸ್ರೇಲ್‌ಗೆ ಖಡಕ್ ಸೂಚನೆ ನೀಡಿದೆ.

ಗಾಝಾದಲ್ಲಿ ಪ್ಯಾಲೆಸ್ತೀನ್ ನಾಗರಿಕರ ರಮೇಧವನ್ನು ನಿಲ್ಲಿಸಲು ಇಸ್ರೇಲ್ ವಿರುದ್ಧ ತಾತ್ಕಾಲಿಕ ಕ್ರಮಗಳನ್ನು ಹೊರಡಿಸುವ ಅಗತ್ಯವಿದೆ ಎಂದು ‌ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.

ಇಸ್ರೇಲ್ ವಿರುದ್ಧ ಹೊರಿಸಲಾದ ನರಮೇಧ ಆರೋಪವನ್ನು ವಜಾಗೊಳಿಸಬೇಕೆಂಬ ಮನವಿಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಇದೇ ಸಂದರ್ಭ ತಿರಸ್ಕರಿಸಿದೆ.

ಗಾಝಾದಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ದಕ್ಷಿಣ ಆಫ್ರಿಕಾ ಸಲ್ಲಿಸಿದ ಪ್ರಕರಣದಲ್ಲಿ ನ್ಯಾಯಾಧೀಶರು ತಮ್ಮ ಮಧ್ಯಾಂತರ ತೀರ್ಪನ್ನು ನೀಡಿದ್ದಾರೆ.

ಈ ಪ್ರದೇಶದಲ್ಲಿ ನಡೆಯುತ್ತಿರುವ ಮಾನವ ದುರಂತದ ವ್ಯಾಪ್ತಿಯ ಬಗ್ಗೆ ನ್ಯಾಯಾಲಯಕ್ಕೆ ಚೆನ್ನಾಗಿ ತಿಳಿದಿದೆ ಮತ್ತು ನಿರಂತರ ಪ್ರಾಣಹಾನಿ ಮತ್ತು ಮಾನವ ಸಂಕಟದ ಬಗ್ಗೆ ತೀವ್ರ ಕಳವಳ ಹೊಂದಿದೆ ಎಂದು ಐಸಿಜೆ ಅಧ್ಯಕ್ಷ ಜೋನ್ ಇ ಡೊನೊಗ್ ಹೇಳಿದ್ದಾರೆ.

Join Whatsapp
Exit mobile version