Home ಟಾಪ್ ಸುದ್ದಿಗಳು ಅಂತರ್ ಧರ್ಮೀಯ ವಿವಾಹ | ಯಾರ ಒತ್ತಾಯವೂ ಇಲ್ಲ ಎಂದ ಯುವತಿ: ಲವ್ ಜಿಹಾದ್ ಎಂದು...

ಅಂತರ್ ಧರ್ಮೀಯ ವಿವಾಹ | ಯಾರ ಒತ್ತಾಯವೂ ಇಲ್ಲ ಎಂದ ಯುವತಿ: ಲವ್ ಜಿಹಾದ್ ಎಂದು ಧರಣಿ ಕೂತಿದ್ದ ಸಂಘಪರಿವಾರಕ್ಕೆ ಮುಖಭಂಗ

ಹುಬ್ಬಳ್ಳಿ: ಸ್ನೇಹಾ ದಮಾಮ್‌ಘರ್ ಮತ್ತು ಇಬ್ರಾಹಿಂ ಸಯ್ಯದ್ ಎಂಬವರ ಅಂತರ್ ಧರ್ಮೀಯ ವಿವಾಹಕ್ಕೆ ಲವ್ ಜಿಹಾದ್ ಬಣ್ಣ ನೀಡಿದ್ದ ಸಂಘಪರಿವಾರ ಯುವತಿಯ ಹೆತ್ತವರೊಂದಿಗೆ ಸೇರಿಕೊಂಡು ಠಾಣೆಗೆ ಮುತ್ತಿಗೆ ಹಾಕಿ ಇಂದು ಧರಣಿ ನಡೆಸಿತ್ತು. ಇದೀಗ ನಮ್ಮ ಮಗಳನ್ನು ಲವ್ ಜಿಹಾದ್ ನಿಂದ ಕಾಪಾಡಿ ಎಂದು ಪ್ರತಿಭಟಿಸಿದ್ದ ಸಂಘಪರಿವಾರ ಮುಖಭಂಗಕ್ಕೀಡಾಗಿದೆ.

ಈ ಬಗ್ಗೆ ವೀಡಿಯೋ ಬಿಡುಗಡೆ ಮಾಡಿರುವ ಯುವತಿ ಸ್ನೇಹ, ನಾನು ಇಬ್ರಾಹಿಂ ಜೊತೆಯಲ್ಲಿಯೇ ಇದ್ದೇನೆ. ನಾವಿಬ್ಬರು ಜೊತೆಯಲ್ಲಿರುವುದು ಅವರ ಮನೆಯವರಿಗೂ ತಿಳಿದಿಲ್ಲ. ನನ್ನನ್ನು ಯಾರು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದಿಲ್ಲ. ನಾನೇ ಪ್ರೀತಿಯಿಂದ ಬಂದಿದ್ದೇನೆ ಎಂದು ಹೇಳಿಕೆ ನೀಡಿದ್ದು ಹಿಂದೂಪರ ಸಂಘಟನೆಗಳ ಧರಣಿಗೆ ತೀವ್ರ ಹಿನ್ನೆಡೆಯಾಗಿದೆ.

ಕಳೆದ ಆರು ತಿಂಗಳಿಂದ ಪ್ರೀತಿಸುತ್ತಿದ್ದ ಈ ಇಬ್ರಾಹೀಂ-ಸ್ನೇಹ ಜೋಡಿ ಕಳೆದ ಫೆಬ್ರವರಿ 11 ರಂದು ಗದಗ ಉಪ ನೋಂದಣಿ ಕಚೇರಿಯಲ್ಲಿ ಸ್ವ ಇಚ್ಚೆಯಿಂದಲೇ ವಿವಾಹವಾಗಿದ್ದರು.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp
Exit mobile version