Home ರಾಷ್ಟ್ರೀಯ ಮಹಾರಾಷ್ಟ್ರದಲ್ಲಿ ತೀವ್ರವಾದ ಮರಾಠ ಮೀಸಲು ಕಿಚ್ಚು: ಬೆಂಗ್ಳೂರು-ಮುಂಬೈ ಹೆದ್ದಾರಿ ತಡೆ, ರೈಲು ಸಂಚಾರ ಸ್ಥಗಿತ

ಮಹಾರಾಷ್ಟ್ರದಲ್ಲಿ ತೀವ್ರವಾದ ಮರಾಠ ಮೀಸಲು ಕಿಚ್ಚು: ಬೆಂಗ್ಳೂರು-ಮುಂಬೈ ಹೆದ್ದಾರಿ ತಡೆ, ರೈಲು ಸಂಚಾರ ಸ್ಥಗಿತ

ನವದೆಹಲಿ: ಹಿಂದುಳಿದ ವರ್ಗಗಳ (ಒಬಿಸಿ) ಅಡಿಯಲ್ಲಿ ಶಿಕ್ಷಣ ಮತ್ತು ಸರ್ಕಾರಿ ಕೆಲಸದಲ್ಲಿ ಮರಾಠ ಜನಾಂಗಕ್ಕೆ ಮೀಸಲಾತಿ ನೀಡಬೇಕೆಂದು ಒತ್ತಾಯದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಕರ್ನಾಟಕದ ಕೆಎಸ್‌ಆರ್‌ಟಿಸಿ ಬಸ್ ಹೊತ್ತಿಸಿದ ಕಾರಣಕ್ಕೆ ಕರ್ನಾಟಕದಿಂದ ಬಸ್ ಸ್ಥಗಿತಗೊಂಡಿದೆ. ಕೆಲವು ರೈಲು ಸಂಚಾರವೂ ಸ್ಥಗಿತಗೊಂಡಿದೆ. ರಸ್ತೆ ತಡೆ, ರೈಲ್ವೆ ಮಾರ್ಗ ತಡೆ ಮುಂತಾದ ಕೃತ್ಯಗಳಲ್ಲದೆ ಅಲ್ಲಲ್ಲಿ ಹಿಂಸಾಕೃತ್ಯಗಳು ನಡೆಯುತ್ತಿದೆ.

ರಾಜ್ಯಾದ್ಯಂತ ಎದ್ದಿರುವ ಗದ್ದಲದ ನಡುವೆ, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವ ಮೂಲಕ ಮರಾಠ ಮೀಸಲಾತಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಕೇಂದ್ರವನ್ನು ಒತ್ತಾಯಿಸಿದ್ದಾರೆ.

Join Whatsapp
Exit mobile version