Home ಟಾಪ್ ಸುದ್ದಿಗಳು ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡುವುದೇ ಸಂಘ ಪರಿವಾರದ ಹಿಡನ್ ಅಜೆಂಡಾ: ಬಿ. ಕೆ. ಹರಿಪ್ರಸಾದ್

ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡುವುದೇ ಸಂಘ ಪರಿವಾರದ ಹಿಡನ್ ಅಜೆಂಡಾ: ಬಿ. ಕೆ. ಹರಿಪ್ರಸಾದ್

ಬೆಂಗಳೂರು: ಕಳಪೆ ಗುಣಮಟ್ಟದ ತ್ರಿವರ್ಣ ಧ್ವಜವನ್ನು  ಮಾರಾಟ ಮಾಡಿ, ಬಾವುಟಕ್ಕೆ ಅವಮಾನ ಮಾಡುವುದೇ ಸಂಘ ಪರಿವಾರದ ಹಿಡನ್ ಅಜೆಂಡಾ ಎಂದು ವಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಈ ಕುರಿತು ಮಾತನಾಡಿದ ಅವರು, ತಿರಂಗಾ ಅಪಶಕುನ ಎಂದು ಘೋಷಿಸಿದ್ದ ವಾರಸುದಾರರ ಪಡೆ ಇಂದು ದೇಶದ ಅಸ್ಮಿತೆಗೆ ಮಸಿ ಬಳಿಯುತ್ತಿದ್ದಾರೆ. ದೇಶದ ಹೆಮ್ಮೆಯ ತ್ರಿವರ್ಣ ಧ್ವಜವೂ ಕೂಡ ಈಗ ಬಿಜೆಪಿಗೆ ವ್ಯಾಪಾರದ ಸರಕಾಗಿದೆ. ಅಂಚೆ ಕಚೇರಿಯಲ್ಲಿ 25.ರೂಗಳಂತೆ ಸಿಗುವ ಧ್ವಜಕ್ಕೆ 38ರೂ.ಗಳಂತೆ ರೈಲ್ವೆ ಇಲಾಖೆ ನೌಕಕರ ಸಂಬಳದಲ್ಲಿ ಕತ್ತರಿ ಹಾಕಿದೆ. ದೇಶದಲ್ಲಿ 11.8ಲಕ್ಷ ರೈಲ್ವೆ ಉದ್ಯೋಗಿಗಳಿದ್ದಾರೆ. 38×11,80,000=4.484 ಕೋಟಿ. ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ ಎಂದು ಆಕ್ಷೇಪಿಸಿದರು.

ಪ್ರಧಾನಿ ಮೋದಿಯವರಿಂದ ಹಿಡಿದು ಬಿಜೆಪಿ ಕಾರ್ಯಕರ್ತರು ಕೂಡ ಕಾಶ್ಮೀರ ಫೈಲ್ಸ್ ಫಿಲ್ಮ್ ಪ್ರಮೋಷನ್ ಗೆ ತೋರಿಸಿದ ಕಾಳಜಿ, ಉಚಿತವಾಗಿ ಟಿಕೆಟ್ ಹಂಚಲು ಕೊಟ್ಟ ಮಹತ್ವ, ತ್ರಿವರ್ಣ ಧ್ವಜಕ್ಕೆ ಯಾಕಿಲ್ಲ? ಧ್ವಜದ ಹೆಸರಿನಲ್ಲಿ ವಸೂಲಿ ಮಾಡುವುದನ್ನು ಬಿಟ್ಟು ಉಚಿತವಾಗಿಯೇ ಹಂಚಬಹುದಿತ್ತಲ್ವಾ? ತ್ರಿವರ್ಣ ಧ್ವಜದಲ್ಲಿಯೂ ಭ್ರಷ್ಟಾಚಾರ ಮಾಡುವ ನೀಚತನವೇ? ಕಮಿಷನ್ ಪಡೆಯದೇ ಯಾವ ಕೆಲಸ‌ವೂ ಮಾಡಬೇಡಿ ಎಂದು ಸಂಘ ಫತ್ವಾ ಹೊರಡಿಸಿದ್ಯಾ  ಎಂದು ಕೇಳಿದರು.

ನಿಮ್ಮ ನಕಲಿ ದೇಶಪ್ರೇಮ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಹೊಸ ವರಸೆಗಳು ವರ್ಕೌಟ್ ಆಗುವುದಿಲ್ಲ. ಇಂತಹ ಟೂಲ್ ಕಿಟ್ ಗಳ ಭ್ರಮೆಗಳಿಂದ ಮೊದಲು ಹೊರಬಂದು ದೇಶದ ಎದುರು ಕ್ಷಮೆ ಕೇಳಿ ಎಂದರು.

ಈ ದೇಶ ಉಳಿಯುವುದು ಅಸಲಿ ದೇಶಪ್ರೇಮಿಗಳಿಂದ ಹೊರತು, ನಕಲಿ ದೇಶಪ್ರೇಮಿಗಳಿಂದಲ್ಲ ಬಿ. ಕೆ. ಹರಿಪ್ರಸಾದ್ ಎಂದು ಹೇಳಿದ್ದಾರೆ.

Join Whatsapp
Exit mobile version