Home ಟಾಪ್ ಸುದ್ದಿಗಳು ಆಶೀರ್ವಾದ ಪಡೆಯಲು ಬಂದ ಸಂಸದನಿಗೆ ಅವಮಾನ; ಸ್ವಾಮೀಜಿಯ ನಡೆಯ ವಿರುದ್ಧ ವ್ಯಾಪಕ ಆಕ್ರೋಶ

ಆಶೀರ್ವಾದ ಪಡೆಯಲು ಬಂದ ಸಂಸದನಿಗೆ ಅವಮಾನ; ಸ್ವಾಮೀಜಿಯ ನಡೆಯ ವಿರುದ್ಧ ವ್ಯಾಪಕ ಆಕ್ರೋಶ

ಬೆಂಗಳೂರು : ಅಸ್ಪೃಶ್ಯನಾದ ನೀನು ಹೇಗೆ ಒಳಗೆ ಬಂದೆ, ನನ್ನ ಕಾಲು ಮುಟ್ಟಬೇಡ ಎಂದು ಸ್ವಾಮೀಜಿಯೊಬ್ಬರು ಸಂಸದರೊಬ್ಬನನ್ನು ಅವಮಾನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ದಲಿತ ಸಮುದಾಯಕ್ಕೆ ಸೇರಿದ ಉತ್ತರಪ್ರದೇಶದ ಸಂಸದ ಡಾ. ರಾಮಶಂಕರ್ ಕಠೇರಿಯಾ ಅವರು ಶಂಕರಾಚಾರ್ಯ ಸ್ವಾಮೀಜಿಯವರನ್ನು ಭೇಟಿ ಮಾಡಲು ಹೋದಾಗ ಅವರು ತನ್ನ ಪಾದ ಮುಟ್ಟಿ ನಮಸ್ಕರಿಸಲೂ ಕೂಡ ಆಸ್ಪದ ನೀಡದೆ ಹೀಯಾಳಿಸಿದ್ದಾರೆ.


ಪ್ರಸ್ತುತ ಘಟನೆಯನ್ನು ತೀವ್ರವಾಗಿ ಖಂಡಿಸಿ ಟ್ವೀಟ್‌ ಮಾಡಿರುವ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮನುವಾದಿಗಳಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲದಿರುವುದಕ್ಕೆ ಇದೇ ಕಾರಣ. ಆರ್ಟಿಕಲ್ 17 ಅಸ್ಪೃಶ್ಯತೆಯನ್ನು ನಿಷೇಧಿಸಿದೆ ಮತ್ತು ಡಾ ಬಿ ಆರ್ ಅಂಬೇಡ್ಕರ್ ಹಿಂದೂ ಮೂಲಭೂತವಾದಕ್ಕೆ ಏಕೆ ವಿರುದ್ಧವಾಗಿದೆ ಎಂಬುದನ್ನು ನಾನು ನೆನಪಿಸುತ್ತೇನೆ ಎಂದು ಸ್ವಾಮೀಜಿಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.


ಈ ಪೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು ಸ್ವಾಮೀಜಿಯ ಈ ನಡೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version