Home ಕರಾವಳಿ ಕೊರಗಜ್ಜನ ವೇಷ ಹಾಕಿ ಅವಮಾನ : ರವೀಂದ್ರ ವಿರುದ್ಧ ಪ್ರಕರಣ ದಾಖಲು

ಕೊರಗಜ್ಜನ ವೇಷ ಹಾಕಿ ಅವಮಾನ : ರವೀಂದ್ರ ವಿರುದ್ಧ ಪ್ರಕರಣ ದಾಖಲು

ಕಾರ್ಕಳ: ಕೊರಗಜ್ಜನ ವೇಷ ಹಾಕಿ ಅವಮಾನ ಆಗುವ ರೀತಿಯಲ್ಲಿ ವರ್ತಿಸಿರುವ ರವೀಂದ್ರ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರಗಜ್ಜ ದೈವದ ಅವಹೇಳನ ಮಾಡಿರುವುದು ಧಾರ್ಮಿಕ ಭಾವನೆಗೆ ನೋವಾಗುವ ರೀತಿಯಲ್ಲಿದ್ದ ಕಾರಣ ಸ್ನೇಹಿತ‌ ಯೋಗೀಶನ ಮೊಬೈಲ್‌ ನಿಂದ ಚೇತನ್‌ ರವರು ರವೀಂದ್ರನ ಮೊಬೈಲ್‌ ಗೆ ಕರೆ ಮಾಡಿ ವಿಚಾರಿಸಿದಾಗ ರವೀಂದ್ರನು ತಾನು ಕೊರಗಜ್ಜನ ಬಗ್ಗೆ ಸ್ಟೇಟಸ್‌ ಹಾಕಿದ್ದೇನೆ ಏನಾಯ್ತು, ಮುಂದೆಯೂ ಇದಕ್ಕಿಂತ ಹೆಚ್ಚಿನ ರೀತಿಯ ವೇಷ ಹಾಕಿ ಸಂಭ್ರಮಿಸುತ್ತೇನೆ ಎಂದು ಮರು ಉತ್ತರ ನೀಡಿದ್ದ ಎನ್ನಲಾಗಿದೆ.

ಚೇತನ್‌ ನೀಡಿದ ದೂರಿನಂತೆ ರವೀಂದ್ರನ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version