Home ಟಾಪ್ ಸುದ್ದಿಗಳು ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಮಹಾ ಎಡವಟ್ಟು: ಗಂಡಿನ ಬದಲಾಗಿ ಪಾಲಕರಿಗೆ ಹೆಣ್ಣು ಮಗು ನೀಡಿದ ವೈದ್ಯರು!

ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಮಹಾ ಎಡವಟ್ಟು: ಗಂಡಿನ ಬದಲಾಗಿ ಪಾಲಕರಿಗೆ ಹೆಣ್ಣು ಮಗು ನೀಡಿದ ವೈದ್ಯರು!

ಹುಬ್ಬಳ್ಳಿ: ಪಾಲಕರಿಗೆ ಗಂಡಿನ ಬದಲಾಗಿ ಹೆಣ್ಣು ಮಗು ನೀಡುವ ಮೂಲಕ ವೈದ್ಯರು ಮಹಾ ಎಡವಟ್ಟು ಮಾಡಿಕೊಂಡ ಘಟನೆ ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ನಡೆದಿದೆ.

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ‌ ದಂಪತಿಗೆ ಗಂಡು‌ ಮಗು ಹುಟ್ಟಿತ್ತು. ಆದರೆ, ವೈದ್ಯರು ತಾಯಿಗೆ ಹೆಣ್ಣು ಮಗು ಕೊಟ್ಟಿದ್ದಾರೆ. ಗಂಡು‌ ಮಗುವನ್ನು ಅಲ್ಲಿರುವ ಸಿಬ್ಬಂದಿ ಮಾರಾಟ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ಮಗುವಿನ ಪೋಷಕರು ಆರೋಪ ಮಾಡಿದ್ದಾರೆ.

ಘಟನೆ ವಿವರ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುರುಣಗಿ ಗ್ರಾಮದ ಮುತ್ತವ್ವ ಎಂಬ ಮಹಿಳೆಗೆ 15 ದಿನಗಳ ಹಿಂದೆ ಗಂಡು ಮಗು ಜನಿಸಿತ್ತು. ಕಿಮ್ಸ್ ಸಿಬ್ಬಂದಿಯೇ ಗಂಡು ಮಗು ಎಂದು ದಾಖಲಾತಿ ಕೊಟ್ಟಿದ್ದಾರೆ. ಮಗು ತೂಕ ಕಡಿಮೆ ಇದೆ ಎನ್ನುವ ಕಾರಣಕ್ಕೆ ಮಗು ICU ನಲ್ಲಿ ಇಡಲಾಗಿತ್ತು. 15 ದಿನಗಳ ಕಾಲ ಗಂಡು ಮಗು ಎಂದು‌ ನಂಬಿದ್ದ ದಂಪತಿಗೆ ಇವತ್ತು ಶಾಕ್ ಎದುರಾಗಿತ್ತು. ಇವತ್ತು ಸಿಬ್ಬಂದಿ ಮಗುವಿನ ಪೋಷಕರಿಗೆ ಹೆಣ್ಣು ಮಗು ಕೊಟ್ಟಿದ್ದಾರೆ. ಇದರಿಂದ ಕೆಲ ಕಾಲ ಪೋಷಕರು ಗೊಂದಲಕ್ಕೆ ಜಾರಿದ್ದರು. 15 ದಿನಗಳ ಹಿಂದೆ ಗಂಡು‌ ಮಗು ಎಂದು ಹೇಳಿದ್ದವರು, ಇವತ್ಯಾಕೆ ಹೆಣ್ಣು ಮಗು ನೀಡಿದ್ದಾರೆ ಎಂದು ಮಗುವಿನ ಪೋಷಕರು ಸಿಬ್ಬಂದಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಇದೊಂದೆ ಘಟನೆ ಅಲ್ಲ, ಕಿಮ್ಸ್​ನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಯಡವಟ್ಟು ಸಹಜ. ವೈದ್ಯರ ನಿರ್ಲಕ್ಷ್ಯ, ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡದೆ ಇರುವುದು, ಮಕ್ಕಳ ಮಾರಾಟದ ಬಗ್ಗೆಯೂ ಕಿಮ್ಸ್ ಮೇಲೆ ಗಂಭೀರ ಆರೋಪ ಇದೆ. ಇವತ್ತಿನ ಎಡವಟ್ಟು ಕೂಡ ಹಲವು ಅನುಮಾನಕ್ಕೆ ಕಾರಣವಾಗಿದೆ. ಗಂಡು ಮಗು ಎಂದು ಹೆಣ್ಣು ಮಗು ಕೊಡುವ ಮೂಲಕ ಗಂಡು ಮಗು ಮಾರಾಟ ಮಾಡಲು ಮುಂದಾಗಿರುವ ಬಗ್ಗೆ ಅನುಮಾನ ಮೂಡಿದೆ.

Join Whatsapp
Exit mobile version