Home ಟಾಪ್ ಸುದ್ದಿಗಳು ಶೇ.10 ಬದಲು 10 ಯೂನಿಟ್ ಉಚಿತ ವಿದ್ಯುತ್ ನೀಡಲು ಸಂಪುಟ ಅಸ್ತು

ಶೇ.10 ಬದಲು 10 ಯೂನಿಟ್ ಉಚಿತ ವಿದ್ಯುತ್ ನೀಡಲು ಸಂಪುಟ ಅಸ್ತು

ಬೆಂಗಳೂರು: ಗೃಹ ಜ್ಯೋತಿ ಯೋಜನೆಯಡಿ ನೀಡಲಾಗುವ ಉಚಿತ ವಿದ್ಯುತನ್ನು ಶೇಕಡ 10 ಯೂನಿಟ್ ಬದಲಾಗಿ 10 ಯೂನಿಟ್ ನೀಡಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

48 ಯೂನಿಟ್’ಗಿಂತ ಕಡಿಮೆ ಬಳಕೆ ಮಾಡುವವರಿಗೆ 10 ಪರ್ಸೆಂಟ್ ಹೆಚ್ಚುವರಿಯಾಗಿ ವಿದ್ಯುತ್ ನೀಡುತ್ತಿದ್ದೇವು. ಆದ್ರೆ, ಇದೀಗ 10 ಯೂನಿಟ್ ಕೊಡಲು ತೀರ್ಮಾನ ಮಾಡಿದ್ದೇವೆ. 48 ಯೂನಿಟ್ ಕೊಟ್ಟರೂ ಕಡಿಮೆ ಬಳಕೆ ಮಾಡ್ತಾ ಇದ್ದರು, ಕೇವಲ 20-25 ಯೂನಿಟ್ ಯುಸ್ ಮಾಡಿದಾಗ ಕೇವಲ 2 ಪರ್ಸೆಂಟ್ ಕೊಡಬೇಕಿತ್ತು. ಆದ್ರೆ, ಇದೀಗ 48 ಇರೋದು 58 ಯೂನಿಟ್ ಆಗುತ್ತದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಈ ಕುರಿತು ಮಾಹಿತಿ ನೀಡಿದ್ದಾರೆ.

ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 500-600 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ. ಆದರೆ ಬಡವರಿಗೆ ಅನುಕೂಲ ಆಗುತ್ತದೆ” ಎಂದು ಸಚಿವರು ಹೇಳಿದ್ದಾರೆ.

Join Whatsapp
Exit mobile version