Home ಟಾಪ್ ಸುದ್ದಿಗಳು ಸೌದಿ ಅರೇಬಿಯಾದಲ್ಲಿ ಹಣವರ್ಗಾವಣೆ ಇನ್ನೂ ಸುಲಭ | ಫೆ.21ರಿಂದ ತ್ವರಿತ ಪಾವತಿ ಯೋಜನೆಗೆ ಚಾಲನೆ

ಸೌದಿ ಅರೇಬಿಯಾದಲ್ಲಿ ಹಣವರ್ಗಾವಣೆ ಇನ್ನೂ ಸುಲಭ | ಫೆ.21ರಿಂದ ತ್ವರಿತ ಪಾವತಿ ಯೋಜನೆಗೆ ಚಾಲನೆ

ಫ್ರೆಬ್ರವರಿ 21 ರ ನಂತರ ಸೌದಿ ಅರೇಬಿಯಾದ ಬ್ಯಾಂಕುಗಳ ನಡುವೆ ಹಣ ವರ್ಗಾವಣೆಯು ತ್ವರಿತಗತಿಯಲ್ಲಿ ಮುಗಿಸಬಹುದು ಸೌದಿ ಸೆಂಟ್ರಲ್ ಬ್ಯಾಂಕ್ ತಿಳಿಸಿದೆ. ಸೌದಿ ಸೆಂಟ್ರಲ್ ಬ್ಯಾಂಕ್ ನ ಹೊಸ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದು, ಫೆ.21ರಿಂದ ನೂತನ ವ್ಯವಸ್ಥೆ ಜಾರಿಯಾಗಲಿದೆ ಎಂದು ವರದಿಗಳು ತಿಳಿಸಿವೆ.   

ವಾರದ ಎಲ್ಲಾ ದಿನಗಳಲ್ಲಿ, ದಿನದ 24 ಗಂಟೆಯೂ ಈ ನೂತನ ಸೇವೆ ಲಭ್ಯವಿರುತ್ತದೆ ಎಂದು ಸೆಂಟ್ರಲ್ ಬ್ಯಾಂಕ್ ಪ್ರಕಟನೆಯಲ್ಲಿ ತಿಳಿಸಿದೆ. ಡಿಜಿಟಲ್ ವ್ಯವಸ್ಥೆಯ ಮೂಲಕ ಸ್ಥಳೀಯ ಬ್ಯಾಂಕ್ ಖಾತೆಗಳ ನಡುವೆ ಶೀಘ್ರವಾಗಿ ಹಣ ವರ್ಗಾವಣೆ ನೂತನ ಯೋಜನೆಯ ಮೂಲಕ ಸಾಧ್ಯವಾಗುತ್ತದೆ.

ಪ್ರಸ್ತುತ ವರ್ಗಾವಣೆ ಶುಲ್ಕಕ್ಕಿಂತ ಈ ನೂತನ ಯೋಜನೆಯ ಶುಲ್ಕ ಕಡಿಮೆಯಾಗಿರುತ್ತದೆ. ಹಣಕಾಸು ಸಂಸ್ಥೆಗಳು, ವ್ಯಕ್ತಿಗಳು ಮತ್ತು ಕಂಪೆನಿಗಳ ನಡುವೆ ನಡೆಯುವ ಬ್ಯಾಂಕುಗಳ ವಿವಿಧ ಹಣಕಾಸು ವರ್ಗಾವಣೆಯನ್ನು ತ್ವರಿತವಾಗಿ ಪೂರ್ತಿಗೊಳಿಸಲು ಈ ಯೋಜನೆ ಅನುಕೂಲ ಮಾಡಿಕೊಡಲಿದೆ.

Join Whatsapp
Exit mobile version