Home ಟಾಪ್ ಸುದ್ದಿಗಳು ಗನ್ ಹಿಡಿದು ಇನ್ಸ್ಟಾಗ್ರಾಂ ವೀಡಿಯೋ: ಕೆಲಸಕ್ಕೆ ರಾಜೀನಾಮೆ ನೀಡಿದ ಮಹಿಳಾ ಕಾನ್ಸ್ಟೇಬಲ್ ಗೆ ಖುಲಾಯಿಸಿದ ಅದೃಷ್ಟ...

ಗನ್ ಹಿಡಿದು ಇನ್ಸ್ಟಾಗ್ರಾಂ ವೀಡಿಯೋ: ಕೆಲಸಕ್ಕೆ ರಾಜೀನಾಮೆ ನೀಡಿದ ಮಹಿಳಾ ಕಾನ್ಸ್ಟೇಬಲ್ ಗೆ ಖುಲಾಯಿಸಿದ ಅದೃಷ್ಟ !

ಆಗ್ರಾ: ಪೊಲೀಸ್ ಕಾನ್ಸ್ಟೇಬಲ್ ಆಗಿ ನೇಮಕಗೊಂಡಿದ್ದ ಉತ್ತರ ಪ್ರದೇಶದ ಪ್ರಿಯಾಂಕಾ ಮಿಶ್ರಾ ಅವರು ಪೊಲೀಸ್ ಸಮವಸ್ತ್ರ ಧರಿಸಿ, ಕೈಯಲ್ಲಿ ರಿವಾಲ್ವರ್ ಹಿಡಿದು ಪೊಲೀಸ್ ಠಾಣೆಯಲ್ಲೇ ಹಿಂದಿ ಚಿತ್ರದ ಡೈಲಾಗ್ ಹೊಡೆದ ವೀಡಿಯೋ ಇನ್ ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದ್ದಂತೆ ವಿವಾದಕ್ಕೆ ಕಾರಣ ವಾಗಿತ್ತು. ಹೀಗಾಗಿ ಹಿರಿಯ ಅಧಿಕಾರಿಗಳು ಅವರ ವಿರುದ್ಧ ತನಿಖೆ ನಡೆಸುವಂತೆ ಸೂಚಿಸಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು.

ಬಳಿಕ ಇನ್ ಸ್ಟ್ರಾಗ್ರಾಂನಲ್ಲಿ ಇವರು ಹಾಕಿದ್ದ ವೀಡಿಯೋ ಸಿಕ್ಕಾಪಟ್ಟೆ ವೀಕ್ಷಣೆಗೊಳಪಟ್ಟಿತ್ತು. ಕೆಲವೇ ದಿನಗಳಲ್ಲಿ ಮಿಶ್ರಾ ಇನ್ ಸ್ಟಾಗ್ರಾಂ ಫಾಲೋವರ್ಸ್ ಗಳ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಅವರಿಗೆ ವೆಬ್ ಸಿರೀಸ್ ಹಾಗೂ ಮಾಡೆಲಿಂಗ್ ಗಳಲ್ಲಿ ನಟನೆ ಮಾಡುವಂತೆ ಅವಕಾಶ ಬಂದಿದೆ ಎಂದು ಅವರು ಹೇಳಿದ್ದಾರೆ.

Join Whatsapp
Exit mobile version