Home ರಾಷ್ಟ್ರೀಯ ದೇಶದ ಪ್ರಮುಖ ನಗರಗಳಲ್ಲಿ ಇನ್ ಸ್ಟಾಗ್ರಾಂ ಡೌನ್: ಮೆಟಾ ವಿರುದ್ಧ ಆಕ್ರೋಶ

ದೇಶದ ಪ್ರಮುಖ ನಗರಗಳಲ್ಲಿ ಇನ್ ಸ್ಟಾಗ್ರಾಂ ಡೌನ್: ಮೆಟಾ ವಿರುದ್ಧ ಆಕ್ರೋಶ

ನವದೆಹಲಿ: ಮೆಟಾ ಒಡೆತನದ ಜನಪ್ರಿಯ ಸಾಮಾಜಿಕ ಮಾಧ್ಯಮ ಇನ್ ಸ್ಟಾಗ್ರಾಂ ಸೇವೆಯಲ್ಲಿ ಮಂಗಳವಾರ ವ್ಯತ್ಯಯ ಉಂಟಾಗಿದೆ.


ಶೇ 64ರಷ್ಟು ಬಳಕೆದಾರರಿಗೆ ಲಾಗ್ ಇನ್ ಮಾಡುವಲ್ಲಿ ಸಮಸ್ಯೆ ಕಾಣಿಸಿಕೊಂಡರೆ, ಶೇ 24ರಷ್ಟು ಬಳಕೆದಾರರಿಗೆ ಸರ್ವರ್ ಸಂಪರ್ಕದಲ್ಲಿಯೇ ಸಮಸ್ಯೆ ಕಾಣಿಸಿಕೊಂಡಿದೆ.


ದೆಹಲಿ, ಜೈಪುರ, ಲಖನೌ, ಮುಂಬೈ, ಅಹಮದಾಬಾದ್, ಕೋಲ್ಕತ್ತ, ಹೈದರಾಬಾದ್, ಬೆಂಗಳೂರು, ಚೆನ್ನೈ ಸೇರಿದಂತೆ ಹಲವು ನಗರಗಳಲ್ಲಿ ಅಡಚಣೆ ಉಂಟಾಗಿದೆ ಎಂದು ತಿಳಿದುಬಂದಿದೆ.


‘ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಹಲವು ಬಳಕೆದಾರರು ದೂರಿದ್ದು, ‘something went wrong’ ಎಂದು ತೋರಿಸುವ ಫೋಟೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಪದೇ ಪದೇ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಮೆಟಾ ವಿರುದ್ಧ ಕಿಡಿಕಾರಿದ್ದಾರೆ.

Join Whatsapp
Exit mobile version