Home ಟಾಪ್ ಸುದ್ದಿಗಳು ಚಿರತೆ ಆಸ್ಪತ್ರೆಯ ಒಳಗೆ: ರೋಗಿಗಳು, ಸಿಬ್ಬಂದಿ ಆಸ್ಪತ್ರೆಯ ಹೊರಗೆ

ಚಿರತೆ ಆಸ್ಪತ್ರೆಯ ಒಳಗೆ: ರೋಗಿಗಳು, ಸಿಬ್ಬಂದಿ ಆಸ್ಪತ್ರೆಯ ಹೊರಗೆ

ವೀಡಿಯೋ + ಸುದ್ದಿ

ಮಹಾರಾಷ್ಟ್ರ: ರಾತ್ರೋ ರಾತ್ರಿ ಚಿರತೆಯೊಂದು ಆಸ್ಪತ್ರೆಯ ಒಳಗೆ ಪ್ರವೇಶಿಸಿದ್ದು, ಚಿರತೆ ಆಸ್ಪತ್ರೆಯೊಳಗೆ, ರೋಗಿಗಳು, ಸಿಬ್ಬಂದಿ ಆಸ್ಪತ್ರೆಯ ಹೊರಗೆ ಎಂಬಾಂತದ ಘಟನೆ ನಂದೂರ್‌ಬಾರ್‌ ಜಿಲ್ಲೆಯಲ್ಲಿ‌ ನಡೆದಿದೆ.

ಮಹಾರಾಷ್ಟ್ರದ ನಂದೂರ್‌ಬಾರ್‌ ಜಿಲ್ಲೆಯಲ್ಲಿರುವ ಶಹದಾ ಪ್ರದೇಶದ ಆದಿತ್ಯ ಹೆರಿಗೆ ಮತ್ತು ಕಣ್ಣಿನ ಆಸ್ಪತ್ರೆಗೆ ಚಿರತೆ ಪ್ರವೇಶಿಸಿದ್ದು, ಆಸ್ಪತ್ರೆಯ ಸಿಬಂದಿ ಕೂಡಲೇ ಸಮಯ ಪ್ರಜ್ಞೆ ಮೆರೆದು ಚಿರತೆ ಒಳಗೆ ಬಂದ ಬಾಗಿಲನ್ನು ಹೊರಗಿನಿಂದ ಬಂದು ಲಾಕ್ ಮಾಡಿದ್ದಾನೆ. ವಿಷಯ ತಿಳಿದ ರೋಗಿಗಳು, ಸಿಬ್ಬಂದಿ ಭಯದಿಂದ ಹೊರಗೆ ಓಡಿದ್ದಾರೆ. ಆದರೆ ಸಿಬ್ಬಂದಿಯೋರ್ವರ ಸಮಯಪ್ರಜ್ಞೆಯಿಂದ ಚಿರತೆಗೆ ಹೊರಬರಲು ಸಾಧ್ಯವಾಗದೆ ಆಸ್ಪತ್ರೆಯೊಳಗೆ ಬಂಧಿಯಾಗಿದ್ದು, ಯಾವುದೇ ಅಪಾಯ ಆಗಲಿಲ್ಲ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Join Whatsapp
Exit mobile version