Home ಟಾಪ್ ಸುದ್ದಿಗಳು ಬೈಕಿ ಡಿಕ್ಕಿ ಹೊಡೆದು ಹಾರಿ ಪಲ್ಟಿಯಾದ ಇನ್ನೋವಾ ಕಾರು: ಐವರು ಮೃತ್ಯು

ಬೈಕಿ ಡಿಕ್ಕಿ ಹೊಡೆದು ಹಾರಿ ಪಲ್ಟಿಯಾದ ಇನ್ನೋವಾ ಕಾರು: ಐವರು ಮೃತ್ಯು

ಚತುಷ್ಪಥ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಇನೋವಾ ಕಾರು ದ್ವಿಚಕ್ರ ವಾಹನಕ್ಕೆ ಗುದ್ದಿದ್ದು, ಬಳಿಕ ಡಿವೈಡರ್‌ಗೆ ಢಿಕ್ಕಿ ಹೊಡೆದು ಗಾಳಿಯಲ್ಲಿ ಹಾರಿಕೊಂಡು ಪಲ್ಟಿಯಾಗಿ ಬಿದ್ದಿರುವ ಭೀಕರ ಅಪಘಾತ ನಡೆದಿದೆ. ಬೈಕ್ ಸವಾರ ಸೇರಿ ಐವರು ಮೃತರಾಗಿದ್ದಾರೆ. ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಕಾರಿನಲ್ಲಿದ್ದ ಐವರು ಪ್ರಯಾಣಿಕರಿದ್ದರು. ನಾಲ್ವರು ಮೃತಪಟ್ಟಿದ್ದಾರೆ. ಬೈಕ್ ಸವಾರ ಪ್ರಾಣ ಕಳೆದುಕೊಂಡಿದ್ದಾರೆ. ಕಾರಿನಲ್ಲಿದ್ದ ಮೃತರನ್ನು ಕನಗವೇಲ್ ಹಾಗೂ ಆತನ ಪತ್ನಿ ಕೃಷ್ಣಕುಮಾರಿ, ಸಂಬಂಧಿ ನಾಗಜ್ಯೋತಿ, 8 ವರ್ಷದ ಬಾಲಕಿ ಎಂದು ಗುರುತಿಸಲಾಗಿದೆ. ಘಟನೆಯ ವೀಡಿಯೋ‌ ಬೆಚ್ಚಿಬೀಳಿಸುತ್ತಿದೆ.

Join Whatsapp
Exit mobile version