Home ಟಾಪ್ ಸುದ್ದಿಗಳು ಅನುದಾನದಲ್ಲಿ ಅನ್ಯಾಯ: ಇಂದಿನ ಪ್ರತಿಭಟನೆಗೆ ರಾಜ್ಯ ಸರ್ಕಾರಕ್ಕೆ ಅರ್ಧ ಗಂಟೆ ಮಾತ್ರ ಅವಕಾಶ

ಅನುದಾನದಲ್ಲಿ ಅನ್ಯಾಯ: ಇಂದಿನ ಪ್ರತಿಭಟನೆಗೆ ರಾಜ್ಯ ಸರ್ಕಾರಕ್ಕೆ ಅರ್ಧ ಗಂಟೆ ಮಾತ್ರ ಅವಕಾಶ

ನವದೆಹಲಿ: ಅನುದಾನದಲ್ಲಿ ಅನ್ಯಾಯ ವಿರೋಧಿಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್​ ಸರ್ಕಾರ ದೆಹಲಿಯ ಜಂತರ್​ ಮಂತರ್​ನಲ್ಲಿ ನಮ್ಮ ತೆರಿಗೆ ನಮ್ಮ ಹಕ್ಕು ಘೋಷವಾಕ್ಯದಡಿ ಇಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ದೆಹಲಿ ಪೊಲೀಸರು ಬರೀ ಅರ್ಧ ಗಂಟೆ ಅವಕಾಶ ನೀಡಿದ್ದಾರೆ.

ಇಂದು ಬೆಳಗ್ಗೆ (7.2/2024) 11 ಘಂಟೆಗೆ ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ದೆಹಲಿ ಪೊಲೀಸ್​ ಮಧ್ಯಾಹ್ನ 12.30ರಿಂದ 1ರವರೆಗೆ ಮಾತ್ರ ಜಂತರ್ ಮಂತರ್​​ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದೆ.

ದೆಹಲಿ ಚಲೋ ಪಕ್ಷದ ಪ್ರತಿಭಟನೆಯಲ್ಲ. ಸರ್ಕಾರದ ಪ್ರತಿಭಟನೆ, ರಾಜ್ಯಕ್ಕೆ ಆಗ್ತಿರೋ ಅನ್ಯಾಯ ಸರಿಪಡಿಸಲು ಬಿಜೆಪಿ ಸಂಸದರು ಪ್ರತಿಭಟನೆ ಬರಬೇಕು ಎಂದು ಸಿಎಂ ಸಿದ್ದರಾಮಯ್ಯ ಆಹ್ವಾನಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರಿಗೂ ಪತ್ರ ಬರೆದಿದ್ದಾರೆ. ಇಂದು ನಡೆಯುವ ಪ್ರತಿಭಟನೆಗೆ ಹೊಸ ಟಚ್​ ಕೊಡುವ ಸಲುವಾಗಿ ಸಚಿವ ಪ್ರಿಯಾಂಕ್​ ಖರ್ಗೆ ಕನ್ನಡ ಬಾವುಟಗಳನ್ನು ದೆಹಲಿಗೆ ತಂದಿದ್ದಾರೆ.

Join Whatsapp
Exit mobile version