Home ಟಾಪ್ ಸುದ್ದಿಗಳು ಎತ್ತಿನಹೊಳೆ ಕಾಮಗಾರಿ ತೊಂದರೆಗೊಳಗಾಗಿ ದಲಿತ ಮಗು ಮೃತ್ಯು : ಮಣ್ಣು ಮಾಡಿದ್ದ ಮೃತದೇಹ ಹೊರ ತೆಗೆಸಿ...

ಎತ್ತಿನಹೊಳೆ ಕಾಮಗಾರಿ ತೊಂದರೆಗೊಳಗಾಗಿ ದಲಿತ ಮಗು ಮೃತ್ಯು : ಮಣ್ಣು ಮಾಡಿದ್ದ ಮೃತದೇಹ ಹೊರ ತೆಗೆಸಿ ದೌರ್ಜನ್ಯ !

ರಂಗನಾಥ್ ಮತ್ತು ಪವಿತ್ರಾ ವಾಸಿಸುತ್ತಿರುವ ಮನೆ

ತುಮಕೂರು: ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದ್ದಾಗ ಸ್ಪೋಟದಿಂದಾಗಿ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದ್ದ ಹಸುಳೆಯ ಅಂತ್ಯಕ್ರಿಯೆ ನಡೆಸುವಾಗ ಖಾಸಗಿ ಕಂಪೆನಿಯ ಸಿಬ್ಬಂದಿಗಳು ಮಗುವಿನ ಮೃತದೇಹವನ್ನು ಹೊರತೆಗೆಸಿದ ಅಮಾನವೀಯ ಘಟನೆಯೊಂದು ಕೊರಟಗೆರೆ ತಾಲೂಕಿನ ಜಂಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಡ ದಲಿತ ದಂಪತಿಯ 3 ತಿಂಗಳ ಮಗು ಎತ್ತಿನಹೊಳೆ ಕಾಮಗಾರಿಯ ಸ್ಪೋಟದಿಂದಾಗಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿತ್ತು. ಮಗುವಿನ ಮೃತದೇಹವನ್ನು ಸರಕಾರಿ ಜಾಗದಲ್ಲಿ ದಫನ ಮಾಡುತ್ತಿದ್ದರೂ ಖಾಸಗಿ ಗಾರ್ಮೆಂಟ್ಸ್ ಕಂಪೆನಿಯ ಸಿಬ್ಬಂದಿಗಳು ಒತ್ತಾಯಪೂರ್ವಕವಾಗಿ ಮಗುವಿನ ಮೃತದೇಹವನ್ನು ಹೊರತೆಗೆಸಿದ್ದಾರೆ ಎನ್ನಲಾಗಿದೆ.  

ಮಗುವಿನ ಮೃತದೇಹದ ಅಂತ್ಯಕ್ರಿಯೆಯನ್ನು ಮನೆ ಪಕ್ಕದ ಸರಕಾರಿ ಹಳ್ಳದಲ್ಲಿ ನರವೇರಿಸುತ್ತಿದ್ದಾಗ ಹಳ್ಳದ ಪಕ್ಕದಲ್ಲಿರುವ ಖಾಸಗಿ ಗಾರ್ಮೆಂಟ್ಸ್ ನ ಸಿಬ್ಬಂದಿ ‘ಇದು ಕಂಪೆನಿಯ ಜಾಗ, ಇಲ್ಲಿ ದಫನ ಮಾಡಬೇಡಿ” ಎಂದು ಬಲವಂತವಾಗಿ ಮಗುವಿನ ಮೃತದೇಹವನ್ನು ಹೊರ ತೆಗೆಸಿದ್ದಾನೆ.

ಮಣ್ಣು ಮಾಡಿದ ದಲಿತ ಮಗುವಿನ ಮೃತದೇಹ ಹೊರತೆಗೆದು ದೌರ್ಜನ್ಯ : ತುಮಕೂರಿನಲ್ಲೊಂದು ಅಮಾನವೀಯ ಘಟನೆ! Koratagere Dalit

ಘಟನೆಯ ಬಗ್ಗೆ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರರು ಈ ಜಾಗ ನಿಮ್ಮದು ಎಂದಾದರೆ ದಾಖಲೆ ತೋರಿಸಿ ಎಂದು ಕೇಳುತ್ತಿದ್ದಂತೆ ಕಂಪೆನಿಯ ಸಿಬ್ಬಂದಿಗಳು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ನಂತರ ಮಗುವಿನ ಮೃತದೇಹವನ್ನು ಬೇರೆ ಸ್ಥಳದಲ್ಲಿ ತಹಶೀಲ್ದಾರ್ ಗೋವಿಂದರಾಜು ಅವರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿಗೆ ಪೈಪ್ ಅಳವಡಿಸಲು ಅಡ್ಡಿಯಾಗುತ್ತಿದ್ದ ಬಂಡೆಗಳನ್ನು ಸ್ಪೋಟಿಸಿದ್ದರಿಂದಾಗಿ ಹತ್ತಿರದಲ್ಲೇ ವಾಸವಿರುವ ಬಡ ದಲಿತ ದಂಪತಿಗಳಾದ ರಂಗನಾಥ್ ಮತ್ತು ಪವಿತ್ರಾ ಎಂಬವರ 3 ತಿಂಗಳ ಮಗು ಸ್ಪೋಟದ ಸದ್ದಿನಿಂದ ಉಸಿರಾಟದ ಸಮಸ್ಯೆಯುಂಟಾಗಿ ಮೃತಪಟ್ಟಿತ್ತು.

ಮಗುವಿನ ಸಾವಿಗೆ ಎತ್ತಿನಹೊಳೆ ಕಾಮಗಾರಿಯ ಸ್ಪೋಟವೇ ಕಾರಣ ಎಂದು ಸ್ಥಳೀಯರ ಆರೋಪ. ಈ ಬಗ್ಗೆ ತನಿಖೆ ನಡೆಸಿ ಮಗುವಿನ ಕುಟುಂಬಕ್ಕೆ ಪರಿಹಾರ ಕೊಡಿಸುವುದಾಗಿ ತಹಶೀಲ್ದಾರರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Join Whatsapp
Exit mobile version