Home ಟಾಪ್ ಸುದ್ದಿಗಳು ರಾಜ್ಯಸಭೆಗೆ ಇನ್ಫೋಸಿಸ್ ಸುಧಾಮೂರ್ತಿ ನಾಮನಿರ್ದೇಶನ

ರಾಜ್ಯಸಭೆಗೆ ಇನ್ಫೋಸಿಸ್ ಸುಧಾಮೂರ್ತಿ ನಾಮನಿರ್ದೇಶನ

ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಸಭೆ ಸ್ಥಾನಕ್ಕೆ ಸುಧಾಮೂರ್ತಿ ಅವರ ಹೆಸರನ್ನು ನಾಮನಿರ್ದೇಶನ ಮಾಡಿದ್ದಾರೆ.

ಶುಕ್ರವಾರ ಮಹಿಳಾ ದಿನಾಚರಣೆಯಂದು ಈ ಘೋಷಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭೆಯಲ್ಲಿನ ಸುಧಾಮೂರ್ತಿ ಅವರ ಹಾಜರಿಯು, ನಮ್ಮ ದೇಶದ ಭವಿಷ್ಯವನ್ನು ರೂಪಿಸುವಲ್ಲಿನ ಮಹಿಳೆಯರ ಬಲ ಹಾಗೂ ಸಾಮರ್ಥ್ಯಕ್ಕೆ ಉದಾಹರಣೆಯಾಗಿ, ನಮ್ಮ ‘ನಾರಿ ಶಕ್ತಿ’ ಘೋಷಣೆಗೆ ಶಕ್ತಿಶಾಲಿ ಪುರಾವೆಯಾಗಲಿದೆ. ಫಲಪ್ರದ ಸಂಸದೀಯ ಅಧಿಕಾರಕ್ಕಾಗಿ ಅವರಿಗೆ ಶುಭ ಹಾರೈಸುತ್ತೇನೆ” ಎಂದು ಎಕ್ಸ್ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ರಾಜ್ಯಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರ ಒಂದು ಸ್ಥಾನ ಖಾಲಿ ಇತ್ತು. ಅದಕ್ಕೆ ಸುಧಾ ಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. 

Join Whatsapp
Exit mobile version