Home ಜಾಲತಾಣದಿಂದ ಮೋಹನ್ ಭಾಗವತ್’ರ ಹೇಳಿಕೆ; ದೇಶಕ್ಕಾಗಿ ಮಾಡಿದ್ದನ್ನು ಹೇಳಿಕೊಳ್ಳಲು ಏನೂ ಇಲ್ಲದವರ ಕೀಳರಿಮೆ- SDPI

ಮೋಹನ್ ಭಾಗವತ್’ರ ಹೇಳಿಕೆ; ದೇಶಕ್ಕಾಗಿ ಮಾಡಿದ್ದನ್ನು ಹೇಳಿಕೊಳ್ಳಲು ಏನೂ ಇಲ್ಲದವರ ಕೀಳರಿಮೆ- SDPI

ನವದೆಹಲಿ: ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಪಾತ್ರ ಏನೇನೂ ಇಲ್ಲವೆನ್ನುವುದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಚೆನ್ನಾಗಿ ಗೊತ್ತಿದೆ. ಅವರ ಹತಾಶೆಯ ಹೇಳಿಕೆಯ ಹಿಂದಿರುವ ಕಾರಣ ಅದೇ ಆಗಿದೆ. ಸಂಘವು ವಿದೇಶಿ ಪ್ರಭಾವ ಮತ್ತು ದಾಳಿಯ ಬಗ್ಗೆ ಆಗಾಗ ಹೇಳುವುದು ಅದೇ ಕಾರಣಕ್ಕಾಗಿ ಎಂದು SDPI ರಾಷ್ಟ್ರೀಯ ಅಧ್ಯಕ್ಷ ಎಂ. ಕೆ. ಫೈಝಿ ಆರೋಪಿಸಿದ್ದಾರೆ.

ಆರೆಸ್ಸೆಸ್ ಮುಖವಾಣಿ ಆರ್ಗನೈಸರ್ ಮತ್ತು ಪಾಂಚಜನ್ಯದಲ್ಲಿ ಬಂದಿರುವ ಮೋಹನ್ ಭಾಗವತ್’ರ ಸಂದರ್ಶನವು ನಾನಾ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

“ನಾವು ಭಾಗವತ್’ರ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇವೆ. ಆ ಹೇಳಿಕೆಯು ದೇಶದಲ್ಲಿ ಕೋಮು ಗಲಭೆಗೆ ಕಾರಣವಾಗುವಂತಿದೆ ಮತ್ತು ಮುಸ್ಲಿಂ ಸಮುದಾಯಕ್ಕೆ ಅದು ಬೆದರಿಕೆಯಾಗಿದೆ” ಎಂದು ಫೈಝಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಲ್ಲದೆ ಮುಸ್ಲಿಮರಿಗೆ ಬೆದರಿಕೆಯಂತಿರುವ ಭಾಗವತ್’ರ ಹೇಳಿಕೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಭಾರತೀಯ ನ್ಯಾಯಾಂಗಕ್ಕೆ ಅವರು ಮನವಿ ಮಾಡಿದ್ದಾರೆ. ಮುಸ್ಲಿಮರು ತಮ್ಮ ನಂಬಿಕೆಯನ್ನು ಬಿಟ್ಟುಬಿಡಬೇಕು ಎಂಬ ಭಾಗವತ್’ರ ಹೇಳಿಕೆ ಪ್ರಚೋದನಕಾರಿಯಾಗಿದೆ. ಇಸ್ಲಾಂ ಧರ್ಮವು ಮೂಲದಲ್ಲೇ ಜನಾಂಗೀಯ ಉಚ್ಚ – ನೀಚ ನೀತಿಯನ್ನು ಹೊಂದಿಲ್ಲ. ಆದರೆ ಮನುಸ್ಮೃತಿ ಅಂತಹದ್ದನ್ನು ಬೋಧಿಸುತ್ತದೆ ಎಂದು ಫೈಝಿ ಟೀಕಿಸಿದ್ದಾರೆ.

ಆರೆಸ್ಸೆಸ್ ಮುಖ್ಯಸ್ಥರ ಜನಾಂಗೀಯವಾದಿ, ದೇಶ ವಿರೋಧಿ, ಸಂವಿಧಾನ ವಿರೋದಿ ಹೇಳಿಕೆಯನ್ನು ಎಸ್ ಡಿಪಿಐ ನಾಯಕರು ಖಂಡಿಸಿದ್ದಾರೆ. ಭಾಗವತ್’ರ ಹೇಳಿಕೆಯು ನಾನಾ ಕೋಮುಗಳ ನಡುವೆ ಇಸ್ಲಾಂ ಹೊಂದಿರುವ ಸಂಬಂಧ ಮತ್ತು ಕೋಮು ಸಾಮರಸ್ಯವನ್ನು ಕದಡುವ ಉದ್ದೇಶವನ್ನು ಹೊಂದಿದೆ ಎಂದು ಅವರು ಟೀಕಿಸಿದ್ದಾರೆ.

Join Whatsapp
Exit mobile version