Home ಟಾಪ್ ಸುದ್ದಿಗಳು ಕೆಎಸ್ ಆರ್ ಟಿಸಿಗೆ ‘ಪಲ್ಲಕ್ಕಿ’ ಸೇರ್ಪಡೆ

ಕೆಎಸ್ ಆರ್ ಟಿಸಿಗೆ ‘ಪಲ್ಲಕ್ಕಿ’ ಸೇರ್ಪಡೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ನೂತನ ಮಾದರಿಯ ನಾನ್ ಎಸಿ ಸ್ಲೀಪರ್ ಬಸ್ ಗಳ ಸೇರ್ಪಡೆಯಾಗಿದೆ.


ಈ ನೂತನ ನಾನ್ ಎಸಿ ಸ್ಲೀಪರ್ ಬಸ್ ಗಳಿಗೆ ಪಲ್ಲಕ್ಕಿ ಎಂಬ ಹೆಸರಿಡಲಾಗಿದ್ದು, ‘ಸಂತೋಷವು ಪ್ರಯಾಣಿಸುತ್ತಿದೆ’ ಎನ್ನುವ ಟ್ಯಾಗ್ ಲೈನ್ ನೀಡಲಾಗಿದೆ.
ನಾಳೆ ಅ. 7 ರಂದು ವಿಧಾನಸೌಧ ಪೂರ್ವ ದ್ವಾರದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಬಸ್ ಪಲ್ಲಕ್ಕಿಯ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದು, ಬಳಿಕ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.


40 ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್ ಗಳ ಜೊತೆಗೆ 100 ನೂತನ ಕರ್ನಾಟಕ ಸಾರಿಗೆ ಬಸ್ಸುಗಳ ಸಂಚಾರಕ್ಕೂ ಚಾಲನೆ ಸಿಗಲಿದೆ.

Join Whatsapp
Exit mobile version