ಮಧ್ಯಪ್ರದೇಶ ಬಳೆ ಮಾರುತ್ತಿದ್ದ ಮುಸ್ಲಿಮ್ ವ್ಯಕ್ತಿಗೆ ಗುಂಪು ಹಿಂಸೆ : ದುಷ್ಕರ್ಮಿಗಳ ವಿರುದ್ಧ ಎಫ್.ಐ.ಆರ್ ದಾಖಲು

Prasthutha|

ಇಂದೋರ್: ಮಧ್ಯಪ್ರದೇಶದ ಇಂದೋರ್ ನಲ್ಲಿ ಬಳೆ ಮಾರಾಟ ನಡೆಸುತ್ತಿದ್ದ ಮುಸ್ಲಿಮ್ ಯುವಕನಿಗೆ ಗಂಭೀರವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವಕನ ಮೂಲಕ ಎಸ್.ಡಿ.ಪಿ.ಐ ಇಂದು ದೂರು ದಾಖಲಿಸಿದೆ.

- Advertisement -

ಎಸ್.ಡಿ.ಪಿ.ಐ ನಾಯಕರ ತಂಡವು ಸಂತ್ರಸ್ತ ತಸ್ಲೀಮ್ ಅವರನ್ನು ಸೆಂಟ್ರಲ್ ಕೊತ್ವಾಲಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ದುಷ್ಕರ್ಮಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸಿದೆ

ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ ಸಾಮಾಜಿಕ ಕಾರ್ಯಕರ್ತರ ಗುಂಪು ಇಂದೋರ್ ನ ಮಧ್ಯ ಕೊತ್ವಾಲಿಯ ಠಾಣೆಯ ಹೊರಗಡೆ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿತ್ತು

- Advertisement -

ಘಟನೆಯ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದ್ದು, ಹಲ್ಲೆ ನಡೆಸುತ್ತಿರುವವರ ಗುರುತು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ನಿಟ್ಟಿನಲ್ಲಿ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಐಪಿಸಿ ಸೆಕ್ಷನ್ 14, 147, 298, 153 ಎ, 120 ಬಿ ಮತ್ತು 395 ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹಿಂದುತ್ವ ಗುಂಪಿಗೆ ಸೇರಿದ ದುಷ್ಕರ್ಮಿಗಳ ತಂಡ ಬಳೆ ಮಾರಾಟ ನಡೆಸುತ್ತಿದ್ದ ತಸ್ಲೀಮ್ ಎಂಬ ವ್ಯಕ್ತಿಗೆ ಮಧ್ಯಪ್ರವೇಶದ ಇಂದೋರ್ ನಲ್ಲಿ ಗಂಭೀರವಾಗಿ ಹಲ್ಲೆ ನಡೆಸಿ ಅವರ ಬಳಿಯಿದ್ದ 10 ಸಾವಿರ ನಗದನ್ನು ಲೂಟಿ ಮಾಡಿ ಪರಾರಿಯಾಗಿತ್ತು. ಘಟನೆಗೆ ಸಂಬಂಧಿಸಿದ ವೀಡಿಯೋ ತುಣುಕು ವೈರಲ್ ಆಗುವ ಮೂಲಕ ದುಷ್ಕೃತ್ಯ ಬಹಿರಂಗವಾಗಿತ್ತು.



Join Whatsapp