ಇಂಡೋನೇಷ್ಯಾದಲ್ಲಿ ಭೂಕಂಪ : 35 ಸಾವು; 600ಕ್ಕೂ ಹೆಚ್ಚು ಮಂದಿಗೆ ಗಾಯ

Prasthutha|

ಜಕಾರ್ತ : ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪದಿಂದ ಸಾವಿಗೀಡಾದವರ ಸಂಖ್ಯೆ 35ಕ್ಕೇರಿದೆ. ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಕಂಪನ ದಾಖಲಾಗಿದ್ದು, ಕುಸಿದ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಕ್ಕಿಬಿದ್ದ ಜನರ ರಕ್ಷಣೆಗಾಗಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

- Advertisement -

ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು, ಸದ್ಯಕ್ಕೆ 35 ಮಂದಿ ಸಾವಿಗೀಡಾದ ಮಾಹಿತಿ ದೊರಕಿದೆ. 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕಂಪನದಿಂದ ಆಸ್ಪತ್ರೆಯೊಂದು ಕುಸಿದು ಬಿದ್ದಿದ್ದು, ಅದರಡಿಯಲ್ಲಿ ಅನೇಕರು ಸಿಲುಕಿದ್ದಾರೆ ಎಂದು ವರದಿಯಾಗಿದೆ.

Join Whatsapp