ಆಲಿಕಲ್ಲು ಮಳೆ: ಇಂಡಿಗೋ ವಿಮಾನಕ್ಕೆ ಹಾನಿ

Prasthutha|

ಹೈದರಾಬಾದ್: ಆಲಿಕಲ್ಲು ಮಳೆಗೆ ಇಂಡಿಗೋ ಸಂಸ್ಥೆಯ ವಿಮಾನ ಹಾನಿಗೊಳಗಾದ ಘಟನೆ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

- Advertisement -


ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ. ವಿಮಾನಕ್ಕೆ ಹಾನಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.


ಆಲಿಕಲ್ಲು ಮಳೆಯಿಂದ ವಿಮಾನದ ರೇಡೋಮ್ ಮತ್ತು ವಿಂಡ್ ಶೀಲ್ಡ್ ಗಳಿಗೆ ಹಾನಿಯಾಗಿದೆ. ವಿಮಾನದ ಹಾನಿಗೊಳಗಾದ ಭಾಗಗಳನ್ನು ನಂತರ ಬದಲಾಯಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

Join Whatsapp
Exit mobile version