Home ಟಾಪ್ ಸುದ್ದಿಗಳು ರನ್ ವೇನಲ್ಲಿ ಪ್ರಯಾಣಿಕರ ಆಹಾರ ಸೇವೆ: ಇಂಡಿಗೋಗೆ 1.2 ಕೋಟಿ ದಂಡ

ರನ್ ವೇನಲ್ಲಿ ಪ್ರಯಾಣಿಕರ ಆಹಾರ ಸೇವೆ: ಇಂಡಿಗೋಗೆ 1.2 ಕೋಟಿ ದಂಡ

ನವದೆಹಲಿ: ಮುಂಬೈ ಏರ್ಪೋರ್ಟ್ ರನ್ ವೇನಲ್ಲಿ ಪ್ರಯಾಣಿಕರು ಕುಳಿತು ಆಹಾರ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೋ ಸಂಸ್ಥೆಗೆ 1.2 ಕೋಟಿ ರೂ. ದಂಡ ವಿಧಿಸಲಾಗಿದೆ.


ಗೋವಾ-ದೆಹಲಿ ಮಾರ್ಗದ ಇಂಡಿಗೋ ವಿಮಾನ ಹಾರಾಟ ವಿಳಂಬವಾದ ಕಾರಣ ಪ್ರಯಾಣಿಕರು ರನ್ ವೇನಲ್ಲಿ ಕುಳಿತು ಊಟ ಸೇವಿಸಿದ್ದರು. ಆ ದೃಶ್ಯದ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೋ ವಿಮಾನ ಸಂಸ್ಥೆಗೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ದಂಡ ವಿಧಿಸಿದೆ.

ದೇಶದ ವಿಮಾನಯಾನ ನಿಯಂತ್ರಕ, ಡಿಜಿಸಿಎ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೋ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಗೋ ಹಾಗೂ ಮುಂಬೈ ವಿಮಾನ ನಿಲ್ದಾಣಕ್ಕೆ ಕಾರಣ ಕೇಳಿ ನೋಟಿಸ್‌ ನೀಡಲಾಯಿತು. ಇದೇ ವೇಳೆ ಮುಂಬೈ ವಿಮಾನ ನಿಲ್ದಾಣಕ್ಕೆ ಡಿಜಿಸಿಎ 30 ಲಕ್ಷ ರೂ. ದಂಡ ವಿಧಿಸಿತ್ತು.

Join Whatsapp
Exit mobile version