Home ಟಾಪ್ ಸುದ್ದಿಗಳು ಭಾರತದ ಉಕ್ಕಿನ ಮನುಷ್ಯ ಖ್ಯಾತಿಯ ಪದ್ಮಭೂಷಣ ಡಾ. ಜಮ್ಶೆಡ್‌ ಜೆ ಇರಾನಿ ನಿಧನ

ಭಾರತದ ಉಕ್ಕಿನ ಮನುಷ್ಯ ಖ್ಯಾತಿಯ ಪದ್ಮಭೂಷಣ ಡಾ. ಜಮ್ಶೆಡ್‌ ಜೆ ಇರಾನಿ ನಿಧನ

ನವದೆಹಲಿ: ಭಾರತದ ಉಕ್ಕಿನ ಮನುಷ್ಯ (ಸ್ಟೀಲ್ ಮ್ಯಾನ್ ಆಫ್ ಇಂಡಿಯಾ) ಖ್ಯಾತಿಯ ಪದ್ಮಭೂಷಣ ಡಾ. ಜಮ್ಶೆಡ್‌ ಜೆ ಇರಾನಿ(86) ಅವರು ಸೋಮವಾರ ರಾತ್ರಿ ನಿಧನರಾದರು.


ಜೆಮ್ಶೆಡ್‌ಪುರದಲ್ಲಿರುವ ಟಾಟಾ ಆಸ್ಪತ್ರೆಯಲ್ಲಿ ಅಕ್ಟೋಬರ್‌ 31ರ ರಾತ್ರಿ 10ರ ವೇಳೆಗೆ ಇರಾನಿ ನಿಧನರಾದರು ಎಂದು ಟಾಟಾ ಸ್ಟೀಲ್‌ ಕಂಪೆನಿ ತಿಳಿಸಿದೆ.


ಜಿಜಿ ಇರಾನಿ ಮತ್ತು ಖೋರ್ಶೆಡ್‌ ಇರಾನಿ ದಂಪತಿಯ ಮಗನಾಗಿ 1936ರ ಜೂನ್‌ 2ರಂದು ನಾಗ್ಪುರದಲ್ಲಿ ಜನಿಸಿದ ಜಮ್ಶೆಡ್‌ ಇರಾನಿ, ನಾಗ್ಪುರದ ವಿಜ್ಞಾನ ಕಾಲೇಜಿನಲ್ಲಿ 1956ರಲ್ಲಿ ಬಿಎಸ್‌ಸಿ ಮತ್ತು ನಾಗ್ಪುರ ವಿಶ್ವವಿದ್ಯಾಲಯದಲ್ಲಿ 1958ರಲ್ಲಿ ಭೂವಿಜ್ಞಾನ ವಿಷಯದಲ್ಲಿ ಎಂಎಸ್‌ಸಿ ಪದವಿ ಪಡೆದಿದ್ದರು.


ಬಳಿಕ ಜೆಎನ್ ಟಾಟಾ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡ್‌ ತೆರಳಿ ಶೆಫಿಲ್ಡ್‌ ವಿಶ್ವವಿದ್ಯಾಲಯದಲ್ಲಿ ಲೋಹಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (1960) ಮತ್ತು ಪಿಎಚ್‌ಡಿ (1963) ಪೂರ್ಣಗೊಳಿಸಿದ್ದರು.

2011ರ ಜೂನ್‌ನಲ್ಲಿ ಟಾಟಾ ಸ್ಟೀಲ್ ಮಂಡಳಿಯಿಂದ ಇರಾನಿ ನಿವೃತ್ತರಾಗಿದ್ದರು.

Join Whatsapp
Exit mobile version