Home ಟಾಪ್ ಸುದ್ದಿಗಳು ಪಾಕಿಸ್ಥಾನಕ್ಕೆ ಆಕಸ್ಮಿಕವಾಗಿ ಉಡಾವಣೆಯಾದ ಕ್ಷಿಪಣಿ: ವಿಷಾದ ವ್ಯಕ್ತಪಡಿಸಿದ ಭಾರತ ರಕ್ಷಣಾ ಸಚಿವಾಲಯ

ಪಾಕಿಸ್ಥಾನಕ್ಕೆ ಆಕಸ್ಮಿಕವಾಗಿ ಉಡಾವಣೆಯಾದ ಕ್ಷಿಪಣಿ: ವಿಷಾದ ವ್ಯಕ್ತಪಡಿಸಿದ ಭಾರತ ರಕ್ಷಣಾ ಸಚಿವಾಲಯ

ನವದೆಹಲಿ: ಪಾಕಿಸ್ಥಾನಕ್ಕೆ ಆಕಸ್ಮಿಕವಾಗಿ ಕ್ಷಿಪಣಿ ಉಡಾವಣೆಯಾಗಿದ್ದು ತಾಂತ್ರಿಕ ದೋಷದಿಂದ ಈ ಪ್ರಮಾದ ಉಂಟಾಗಿದೆ ಎಂದು ಭಾರತೀಯ ರಕ್ಷಣಾ ಸಚಿವಾಲಯ ಹೇಳಿದೆ. ಅಲ್ಲದೆ ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದೆ. ವಾಡಿಕೆಯ ನಿರ್ವಹಣೆಯ ಸಂದರ್ಭದಲ್ಲಿ, ತಾಂತ್ರಿಕ ದೋಷವು ಆಕಸ್ಮಿಕವಾಗಿ ಕ್ಷಿಪಣಿಯನ್ನು ಹಾರಿಸಲು ಕಾರಣವಾಗಿದೆ ಎಂದು ಸಚಿವಾಲಯವು ತಿಳಿಸಿದೆ.

ಗುರುವಾರ ಪಾಕಿಸ್ಥಾನ ಸೇನೆಯು ಭಾರತದಿಂದ ಅತಿವೇಗದ ಕ್ಷಿಪಣಿ ಉಡಾವಣೆಗೊಂಡು ಪಾಕಿಸ್ಥಾನದ ವಾಯುಪ್ರದೇಶವನ್ನು ಪ್ರವೇಶಿಸಿದೆ ಎಂದು ಹೇಳಿತ್ತು. ಖನೇವಾಲ್ ಜಿಲ್ಲೆಯ ಮಿಯಾನ್ ಚನ್ನು ಬಳಿ ಕ್ಷಿಪಣಿಯು ಬಿದ್ದಿರುವ ಬಗ್ಗೆ ವರದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವಾಲಯ ಈ ಘಟನೆಯನ್ನು ಭಾರತ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ ಮತ್ತು ಉನ್ನತ ಮಟ್ಟದ ನ್ಯಾಯಾಲಯದ ವಿಚಾರಣೆಗೆ ಆದೇಶಿಸಿದೆ ಎಂದು ಹೇಳಿದೆ.

Join Whatsapp
Exit mobile version